ಬಿಗ್ ಬಾಸ್ ಮನೆಯ (Bigg Boss Kannada 10) ಫಿನಾಲೆ ವಾರದಲ್ಲಿ ತುಕಾಲಿ ಸಂತೋಷ್ ಔಟ್ ಆಗಿದ್ದಾರೆ. ಫಿನಾಲೆಯ ಅಂತಿಮ ಹಂತದಲ್ಲಿ ದೊಡ್ಮನೆಯ ಆಟದಿಂದ ತುಕಾಲಿ ಸಂತು (Tukali Santhu) ಎಲಿಮಿನೇಟ್ ಆಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ನೀಲಿ ಚಿತ್ರಗಳ ತಾರೆ ಬಾಯ್ ಫ್ರೆಂಡ್ ಜೊತೆ ಶವವಾಗಿ ಪತ್ತೆ
ಹಾಸ್ಯ ನಟ ತುಕಾಲಿ ಸಂತು ದೊಡ್ಮನೆಗೆ ಕಾಲಿಟ್ಟ ದಿನದಿಂದ ಸ್ಪರ್ಧಿಗಳನ್ನು, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಸಂತು ಇದ್ದಾರೆ ಅಂದರೆ ಅಲ್ಲಿ ನಗುವಿಗೆ ಕೊರತೆ ಇಲ್ಲ ಎಂದರ್ಥ. ಅಷ್ಟರ ಮಟ್ಟಿಗೆ ತುಕಾಲಿ ಸಂತು ಮೋಡಿ ಮಾಡಿದ್ದಾರೆ. ಹೀಗಿರುವಾಗ ಫಿನಾಲೆಯ ದಿನ (ಜ.27) ತುಕಾಲಿ ಸಂತು ಬಿಗ್ ಬಾಸ್ ಆಟದಿಂದ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ.
ಹಳೆಯ ಸೀಸನ್‌ಗಳ ರೆಕಾರ್ಡ್ ಬ್ರೇಕ್ ಮಾಡಿದ ಸೀಸನ್ ಅಂದರೆ ಅದು ‘ಬಿಗ್ ಬಾಸ್ ಸೀಸನ್ 10’ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಷನ್ ಮೂಡಿಸಿದ ಸೀಸನ್ ಎಂದರೆ ತಪ್ಪಾಗಲಾರದು. ಇನ್ನೂ ಕಳೆದ ವಾರ ನಮ್ರತಾ ಎಲಿಮಿನೇಷನ್ ನಡೆದ ನಂತರ ಇದೀಗ ತುಕಾಲಿ ಸಂತು ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ತುಕಾಲಿ ಸಂತು ಎಲಿಮಿನೇಷನ್ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜನಾ ಎಪಿಸೋಡ್ ಪ್ರಸಾರ ಆಗುವವರೆಗೂ ಕಾದುನೋಡಬೇಕಿದೆ.