ಕಿಚ್ಚ ಸುದೀಪ್ (Kichcha Sudeep) ನಿರೂಪಣೆಯ ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಟಿವಿ ಪ್ರೇಕ್ಷಕರ ನೆಚ್ಚಿನ ಬಿಗ್ ಬಾಸ್ ಕಾರ್ಯಕ್ರಮ ಕಳೆದ ಬಾರಿ ಓಟಿಟಿ ಸೀಸನ್ ಮತ್ತು ಟಿವಿ ಬಿಗ್ ಬಾಸ್‌ನಿಂದ ರಂಗೇರಿಸಿತ್ತು. ಈ ಬಾರಿ ಕೂಡ ಓಟಿಟಿ ಸೀಸನ್ ಕೂಡ ಇರುತ್ತಾ, ಇರಲ್ವಾ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಇದೇ ಅಕ್ಟೋಬರ್‌ನಿಂದ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಗಲಿದೆ. ಕಹಾನಿ ಮೇ ಟಿಸ್ಟ್ ಎಂಬಂತೆ ಬಿಗ್ ಬಾಸ್ ಸೀಸನ್ 10 ಸಖತ್ ಗ್ರ್ಯಾಂಡ್ ಓಪನಿಂಗ್ ಇರುವ ಕಾರಣ, ಓಟಿಟಿ ಸೀಸನ್ ಇರೋದಿಲ್ಲ. ನೇರವಾಗಿ ಸೀಸನ್ 10ಕ್ಕೆ ಚಾಲನೆ ಸಿಗಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಇದನ್ನೂ ಓದಿ:ಕನ್ನಡದ ಕಂಪನ್ನು ಪಸರಿಸಲು ‘ಕಾವೇರಿ ಕನ್ನಡ ಮೀಡಿಯಂ’ಗೆ ನಟಿ ಮಹಾಲಕ್ಷ್ಮಿ ಸಾಥ್
ಕಳೆದ ಬಾರಿ ರೂಪೇಶ್ ಶೆಟ್ಟಿ(Roopesh Shetty), ಸಾನ್ಯ ಅಯ್ಯರ್ (Saanya Iyer) ಇದ್ದ ಮೊದಲ ಬಿಗ್ ಬಾಸ್ ಓಟಿಟಿ ಸೀಸನ್ 45 ದಿನಗಳ ಕಾಲ ಮೂಡಿ ಬಂದಿತ್ತು. ಟಿವಿ ಬಿಗ್ ಬಾಸ್ ಎಂದಿನಂತೆ 100 ದಿನಗಳು ಕಿರುತೆರೆಯಲ್ಲಿ ಕಮಾಲ್ ಮಾಡಿತ್ತು. ಈಗ ಮತ್ತೆ ಬಿಗ್ ಬಾಸ್ ನಿರೂಪಕನಾಗಿ ಸುದೀಪ್ ತೆರೆಯ ಮೇಲೆ ರಂಜಿಸಲು ಸಜ್ಜಾಗಿದ್ದಾರೆ.
10ನೇ ಸೀಸನ್ ಈ ಬಾರಿ ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದೆ. ಹೊಸ ಬಗೆಯ ಟಾಸ್ಕ್‌ಗಳನ್ನ ಸ್ಪರ್ಧಿಗಳಿಗೆ ಕೊಡಲಾಗುತ್ತದೆ. ಶೀಘ್ರದಲ್ಲೇ ಬಿಗ್ ಬಾಸ್ 10ರ ಪ್ರೋಮೋ ಶೂಟ್ ಮಾಡಲಾಗುತ್ತದೆ. ಹೆಚ್ಚಿನ ಅಪ್‌ಡೇಟ್‌ಗೆ ಕಾದುನೋಡಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]