‘777 ಚಾರ್ಲಿ’ ಚೆಲುವೆ ಸಂಗೀತಾ ಶೃಂಗೇರಿ (Sangeetha Sringeri) ಇದೀಗ ಸಿನಿಮಾ ಜೊತೆಗೆ ಉದ್ಯಮಿಯಾಗಿ ಗುರುತಿಸಿಕೊಳ್ಳಲು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಹೊಸ ಯೋಜನೆಗೆ ವಿಶೇಷವಾದ ಹೆಸರನ್ನು ನಟಿ ಆಯ್ಕೆ ಮಾಡಿದ್ದಾರೆ.
‘ಬಿಗ್ ಬಾಸ್’ ಕನ್ನಡ ಸೀಸನ್ 10 (Bigg Boss Kannada 10) ಮೂಲಕ ಟಿವಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಈ ಚೆಲುವೆ ಈಗ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಉಡುಪು, ಆಭರಣಗಳು, ಸ್ಪೆಕ್ಸ್‌ಗಳನ್ನು ತಮ್ಮ ಹೊಸ ಯೋಜನೆಯ ಮೂಲಕ ಜನರಿಗೆ ತಲುಪಿಸುವ ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ:ಅಥಿಯಾ ಶೆಟ್ಟಿ ಪ್ರೆಗ್ನೆನ್ಸಿ ಬಗ್ಗೆ ಸುಳಿವು ಕೊಟ್ಟ ಸುನೀಲ್ ಶೆಟ್ಟಿ
ದೊಡ್ಮನೆಯ ಗಟ್ಟಿಗಿತ್ತಿಯಾಗಿ ಗುರುತಿಸಿಕೊಂಡಿದ್ದ ನಟಿಗೆ, ಸಿಂಹಿಣಿ ಎಂದು ಫ್ಯಾನ್ಸ್ ಬಿರುದು ನೀಡಿದ್ದರು. ಹಾಗಾಗಿ ‘ಸಿಂಹಿಣಿ’ (Simhini) ಎಂದೇ ನಟಿ ತಮ್ಮ ಬ್ರ್ಯಾಂಡ್‌ಗೆ (Brand) ಹೆಸರನ್ನು ಫೈನಲ್ ಮಾಡಿದ್ದಾರೆ. ಈ ಮೂಲಕ ಮೈಕಲ್ ಅಜಯ್, ತನಿಷಾರಂತೆಯೇ (Tanisha Kuppanda) ಉದ್ಯಮಿಯಾಗಿ ಸಂಗೀತಾ ಹೊಸ ಹೆಜ್ಜೆ ಇಡುತ್ತಿದ್ದಾರೆ.
ಹರಹರ ಮಹಾದೇವ ಸೀರಿಯಲ್, 777 ಚಾರ್ಲಿ, ಲಕ್ಕಿ ಮ್ಯಾನ್, ಶಿವಾಜಿ ಸುರತ್ಕಲ್ 2 ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಸಂಗೀತಾ ನಟಿಸಿದ್ದಾರೆ. ಆದರೆ ‘ಬಿಗ್ ಬಾಸ್ ಕನ್ನಡ 10’ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು.