ಬಿಗ್‌ಬಾಸ್ ಮನೆಯಿಂದ ಇಶಾನಿ ಔಟ್- ‌ಇಂದು ಇನ್ನೊಬ್ಬರಿಗೆ ಕಾದಿದೆ ಶಾಕ್

Public TV
1 Min Read
ESHANI

ಕೊನೆಗೂ ಬಿಗ್‍ಬಾಸ್ ಮನೆಯಲ್ಲಿ ಇಶಾನಿ (Eshani) ಜರ್ನಿ ಎಂಡ್ ಆಗಿದೆ. ಕಳೆದ ವಾರ ವರ್ತೂರ್ ಸಂತೋಷ್ (Varthur Santhosh) ಅವರ ಕಾರಣದಿಂದ ಎಲಿಮಿನೇಷನ್ (Elimination) ನಡೆದಿರಲಿಲ್ಲ. ಈ ವಾರ ಡಬಲ್ ಎಲಿಮಿನೇಷನ್ ವೀಕ್. ಇಬ್ಬರು ಈ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಕಿಚ್ಚ ಹೇಳಿದ್ದರು.

ಶನಿವಾರದ ಎಪಿಸೋಡ್ ಕೊನೆಯಲ್ಲಿ ಕಿಚ್ಚ, ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ’ ಎಂದು ಕೇಳಿದರು. ಇಶಾನಿ ಎದ್ದು ನಿಂತುಕೊಂಡರು. ಈ ವೇಳೆ ಕಿಚ್ಚ (Kichcha Sudeepa), ನಿಜ. ನಿಮ್ಮ ಪಯಣ ಬಿಗ್‍ಬಾಸ್ (Bigg Boss Kannada) ಮನೆಯಲ್ಲಿ ಮುಗಿಯುತ್ತಿದೆ. ಆಲ್‍ದಿ ಬೆಸ್ಟ್ ಎಂದು ಹೇಳಿದರು. ಭಾನುವಾರದ ಎಪಿಸೋಡ್‍ನಲ್ಲಿ ಇನ್ನೊಬ್ಬರು ಬಿಗ್‍ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ.

ಹೊರಬಿದ್ದ ಇಬ್ಬರೂ ಸ್ಪರ್ಧಿಗಳ ಜೊತೆ ಇಂದಿನ ಎಪಿಸೋಡ್‍ನಲ್ಲಿ ಕಿಚ್ಚ ಸಂವಾದ ನಡೆಸಲಿದ್ದಾರೆ. ಕೊನೆಯದಾಗಿ ಇಶಾನಿ, ‘ನಾನು ಇನ್ನಷ್ಟು ಎಫರ್ಟ್ ಹಾಕಬೇಕಾಗಿತ್ತು, ಆಗಲಿಲ್ಲ. ಮನೆಯಿಂದ ಸಾಕಷ್ಟು ಕಲಿತುಕೊಂಡಿದ್ದೀನಿ. ಉಳಿದ ಎಲ್ಲ ಸ್ಪರ್ಧೆಗಳಿಗೆ ಆಲ್ ದಿ ಬೆಸ್ಟ್’ ಎಂದು ಹೇಳಿದರು. ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ ಅರ್ಜುನ್ ಸರ್ಜಾ

ಅಲ್ಲಿಗೆ ಶನಿವಾರದ ‘ಕಿಚ್ಚನ ಪಂಚಾಯಿತಿ’ ಮುಗಿದಿದೆ. ಇಂದು ಮತ್ಯಾವ ಸ್ಪರ್ಧಿ ಮನೆಯಿಂದ ಹೊರಬೀಳಲಿದ್ದಾರೆ ಎಂಬ ಕುತೂಹಲ ಹಾಗೆಯೇ ಉಳಿದುಕೊಂಡಿದೆ.

Share This Article