ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಚಾಲನೆಗೆ ಕೌಂಟ್ ಡೌನ್ ಶುರುವಾಗಿದೆ. ಬಿಗ್ ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಮೊದಲ ಪ್ರೋಮೋ (Promo) ಕೂಡ ರಿವೀಲ್ ಆಗಿದೆ. ಬಿಗ್ ಬಾಸ್ ಮನೆ ಹೇಗಿದೆ ಎಂಬುದರ ಝಲಕ್ ಕೂಡ ತೋರಿಸಲಾಗಿದ್ದು, ನಟ ಕಮ್ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಖಡಕ್ ಡೈಲಾಗ್ ಹೊಡೆದು ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಇಂದು ಕಿಚ್ಚ ಸುದೀಪ್, ಸ್ಪರ್ಧಿಗಳನ್ನು ದೊಡ್ಮನೆಗೆ ಪರಿಚಯ ಮಾಡಿಕೊಡುವ ಮೂಲಕ ಸ್ವಾಗತಿಸಲಿದ್ದಾರೆ. ಇದೀಗ ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ರಿಲೀಸ್ ಮಾಡಿ ಅಭಿಮಾನಿಗಳಿಗೆ ಮತ್ತಷ್ಟು ಕಿಚ್ಚು ಹಚ್ಚಿಸಿದೆ. ವಿಶೇಷ ಪ್ರೋಮೋದಲ್ಲಿ ಬಿಗ್ ಸರ್ಪ್ರೈಸ್ ಒಂದನ್ನು ನೀಡಲಾಗಿದೆ.
ಬಿಗ್‌ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಡಿಯನ್ಸ್ ಪೋಲ್‌ಗಳ ಮೂಲಕ ಸ್ಪರ್ಧಿಗಳ ಆಯ್ಕೆ ನಡೆಯಲಿದೆ ಎಂದು ಪ್ರೊಮೋದಲ್ಲಿ ತಿಳಿಸಲಾಗಿದೆ. ಇದು ಹೇಗೆ ಇರುತ್ತದೆ ಅನ್ನೋದು ಇಂದು ಸಂಜೆಯೇ ಗೊತ್ತಾಗಲಿದೆ. ಸುದೀಪ್ ಅವರ ಡೈಲಾಗ್ ಕೂಡ ಗಮನ ಸೆಳೆದಿದೆ. ಒಂದು ರಾವಣ, 10 ತಲೆ, ಒಂದು ಮನೆ 10 ಸೀಸನ್ ಎಂದು ಸುದೀಪ್ ಡೈಲಾಗ್ ಹೊಡೆದಿದ್ದಾರೆ.
ಬಿಗ್ ಬಾಸ್ ಸೀಸನ್ 10ಕ್ಕೆ ಅತಿಥಿಗಳಾಗಿ ಹಳೆಯ ಸೀಸನ್ ವಿನ್ನರ್‌ಗಳು ವೇದಿಕೆ ಏರಿದ್ದಾರೆ. ಹಿರಿಯ ನಟಿ ಶ್ರುತಿ, ಪ್ರಥಮ್, ಮಂಜು ಪಾವಗಡ, ಚಂದನ್ ಶೆಟ್ಟಿ ಈ ಶೋನಲ್ಲಿ ಹೈಲೆಟ್ ಆಗಿದ್ದಾರೆ. ಒಟ್ನಲ್ಲಿ ಈ ಸೀಸನ್ ಹೇಗಿರಲಿದೆ ಎಂಬ ಕುತೂಹಲ ಈಗಾಗಲೇ ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ.
ದೊಡ್ಮನೆಗೆ ಈಗಾಗಲೇ ನಮ್ರತಾ ಗೌಡ (Namratha Gowda), ನೀತು ವನಜಾಕ್ಷಿ, ರಕ್ಷಕ್ ಬುಲೆಟ್, ಸ್ನೇಕ್ ಶ್ಯಾಮ್, ಈಶಾನಿ ಸೇರಿದಂತೆ ಹಲವರು ಕಾಲಿಟ್ಟಿದ್ದಾರೆ.




