‘ಬಿಗ್ ಬಾಸ್ ಕನ್ನಡ 10′ ಶೋ (Bigg Boss Kannada 10) ಮೂಲಕ ಜನಪ್ರಿಯತೆ ಗಳಿಸಿರುವ ವಿನಯ್ ಗೌಡ (Vinay Gowda) ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಪತ್ನಿ ಅಕ್ಷತಾ ಜೊತೆ ರಾಜಾ ರಾಣಿ ಶೋಗೆ (Raja Rani) ಜಂಟಿಯಾಗಿ ವಿನಯ್ ಬಂದಿದ್ದಾರೆ. ಇದೀಗ ವಾಹಿನಿಯ ಪ್ರೋಮೋ ರಿವೀಲ್ ಆಗಿದ್ದು, ದಾಂಪತ್ಯದ ಸೀಕ್ರೆಟ್ ಅನ್ನು ವಿನಯ್ ಪತ್ನಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಹಿಮಾಲಯದಿಂದ ಬಂದು ರಾಜಕೀಯ ಮುಖಂಡರಿಗೆ ವಿಶ್ ಮಾಡಿದ ನಟ ರಜನಿ
ಅನುಪಮಾ ಗೌಡ ನಿರೂಪಣೆ ‘ರಾಜ ರಾಣಿ’ ಕಾರ್ಯಕ್ರಮಕ್ಕೆ ವಿನಯ್ ಮತ್ತು ಅಕ್ಷತಾ ಎಂಟ್ರಿ ಕೊಟ್ಟಿದ್ದು, ಇಬ್ಬರೂ ರೊಮ್ಯಾಂಟಿಕ್ ಆಗಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ನಿರೂಪಕಿ, ಬಿಗ್ ಬಾಸ್ ಮನೆಯಲ್ಲಿ ವಿನಯ್ ಆನೆಯಾಗಿ ನೋಡಿದ್ದೇವೆ. ನೀವು ಮನೆಯಲ್ಲಿ ಆನೆನಾ? ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ವಿನಯ್, ಮನೆಯಲ್ಲಿ ಆನೆ ಗೀನೆಗೆಲ್ಲಾ ಬೆಲೆ ಇಲ್ಲ ಎಂದಿದ್ದಾರೆ. ಇವರನ್ನು ಬೆಂಡು ಎತ್ತೋಕೆ ನಾನು ಬೇಕೇ ಬೇಕು ಎಂದು ವಿನಯ್ ಪತ್ನಿ ತಮಾಷೆಯಾಗಿ ಹೇಳಿದ್ದಾರೆ.
ಬಳಿಕ ಮನೆ ಕೆಲಸ ಅಂತ ಬಂದರೆ ವಿನಯ್ ಆನೆನಾ? ಇಲಿನಾ ಎಂದು ನಿರೂಪಕಿ ವಿನಯ್ ಪತ್ನಿಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅವರು ಜೀರೋ ಎಂದು ಅಕ್ಷತಾ ನಗುತ್ತಲೇ ಉತ್ತರಿಸಿದ್ದಾರೆ. ತನ್ನ ಬಗ್ಗೆ ಒಂದೊಂದೇ ಸೀಕ್ರೆಟ್ ಬಿಟ್ಟು ಕೊಟ್ಟಿದಕ್ಕೆ ವಿನಯ್ ಕೂಡ ತಮಾಷೆಯಾಗಿ ತೆಗಿರೋ ಬಾಗಿಲು ಅಂತ ಡೈಲಾಗ್ ಹೊಡೆದಿದ್ದಾರೆ. ವಿನಯ್ ಮಾತಿಗೆ ಶೋನಲ್ಲಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಸದ್ಯ ಈ ಪ್ರೋಮೋ ಪ್ರೇಕ್ಷಕರ ಗಮನ ಸೆಳೆದಿದೆ. ಈ ಶೋ ನೋಡೋಕೆ ಪ್ರೇಕ್ಷಕರು ಕಾತರದಿಂದ ಕಾಯ್ತಿದ್ದಾರೆ.
ಅಂದಹಾಗೆ, ರಾಜಾ ರಾಣಿ ಶೋಗೆ ಸೃಜನ್ ಲೋಕೇಶ್, ಹಿರಿಯ ನಟಿ ತಾರಾ, ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ತೀರ್ಪುಗಾರರಾಗಿ ಸಾಥ್ ನೀಡಲಿದ್ದಾರೆ. ಜೂನ್ 8 ಮತ್ತು 9ರಂದು ರಾತ್ರಿ 7.30ಕ್ಕೆ `ರಾಜಾ ರಾಣಿ’ ಶೋ ಪ್ರಸಾರವಾಗಲಿದೆ.