ಬಿಗ್ ಬಾಸ್ ಬೆಡಗಿ (Bigg Boss Kannada 10) ಸಿರಿ (Siri) ಇತ್ತೀಚೆಗೆ ನಟ ಕಮ್ ಉದ್ಯಮಿ ಪ್ರಭಾಕರ್ ಭೋರೆಗೌಡ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದರು. ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ಜರುಗಿತ್ತು. ಈಗ ಬಿಗ್ ಬಾಸ್ ಕನ್ನಡ 10ರ ಸ್ಪರ್ಧಿಗಳಿಗೆ ಮತ್ತು ಚಿತ್ರರಂಗದ ಕಲಾವಿದರಿಗೆ ಸಿರಿ ಪಾರ್ಟಿ ನೀಡಿದ್ದಾರೆ.
ಸಿರಿ ಮತ್ತು ಪ್ರಭಾಕರ್ ಭೋರೆಗೌಡ ಏರ್ಪಡಿಸಿದ್ದ ಪಾರ್ಟಿಗೆ ದೊಡ್ಮನೆ ಮಂದಿಯೆಲ್ಲಾ ಭಾಗವಹಿಸಿ ಈ ಜೋಡಿಗೆ ಶುಭಕೋರಿದ್ದಾರೆ. ಸಂಗೀತಾ ಶೃಂಗೇರಿ ಕಾರಣಾಂತರಗಳಿಂದ ಗೈರಾಗಿದ್ದರು. ಆದರೆ ಸಂಗೀತಾ ಸಹೋದರ ಸಂತೋಷ್ ಮತ್ತು ಅತ್ತಿಗೆ ಭಾಗಿಯಾಗಿದ್ದರು. ಇದನ್ನೂ ಓದಿ:ದರ್ಶನ್ ಘಟನೆ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ರಂಗಾಯಣ ರಘು
ಸಿರಿ ಜೊತೆ ಇಂದಿಗೂ ಉತ್ತಮ ಒಡನಾಟ ಹೊಂದಿರುವ ಕಾರ್ತಿಕ್ ಮಹೇಶ್, ಪವಿ ಪೂವಪ್ಪ, ಮೈಕಲ್ ಅಜಯ್, ಐಶಾನಿ, ವಿನಯ್ ಗೌಡ ದಂಪತಿ, ನಮ್ರತಾ ಗೌಡ ಸೇರಿದಂತೆ ಕಿರುತೆರೆ ನಟ, ನಟಿಯರು ಭಾಗಿಯಾಗಿ ಈ ಜೋಡಿಗೆ ವಿಶ್ ಮಾಡಿದರು. ಬಳಿಕ ಕಾರ್ಯಕ್ರಮದಲ್ಲಿ ರೊಮ್ಯಾಂಟಿಕ್ ಹಾಡೋದಕ್ಕೆ ಹೆಜ್ಜೆ ಹಾಕಿದ್ದಾರೆ ಸಿರಿ ಮತ್ತು ಪ್ರಭಾಕರ್.
ಇನ್ನೂ ಜೂನ್ 13ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿನ ಭೋಗ ನಂದೀಶ್ವರ ದೇವಾಲಯದಲ್ಲಿ ಸಿರಿ ಮತ್ತು ಉದ್ಯಮಿ ಪ್ರಭಾಕರ್ ಮದುವೆ ಗುರುಹಿರಿಯರ ಸಮ್ಮುಖದಲ್ಲಿ ನೆರವೇರಿತ್ತು. ಪ್ರಭಾಕರ್ ಅವರು ಮೂಲತಃ ಮಂಡ್ಯದವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಅಂದಹಾಗೆ, ಮನೆಯೊಂದು ಮೂರು ಬಾಗಿಲು, ರಂಗೋಲಿ, ಬದುಕು ಸೀರಿಯಲ್‌ಗಳು ಮೂಲಕ ಟಿವಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಸೀಸನ್ 10ರ ಬಿಗ್ ಬಾಸ್ ಕನ್ನಡ ಶೋನಿಂದ ನಟಿ ಸಿರಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ.