ಬಿಗ್ ಬಾಸ್ (Bigg Boss Kannada 12) ಮನೆಯಿಂದ ಹೊರ ಬಂದ ಜಾನ್ವಿ (Jhanvi) ಇದೀಗ ಸ್ಪರ್ಧಿ ಧ್ರುವಂತ್ (Dhruvanth) ಮನಸ್ಥಿತಿಯ ಕುರಿತು ಆಕ್ರೋಶ ಹೊರ ಹಾಕಿದ್ದಾರೆ.
ಅಶ್ವಿನಿ ಜೊತೆ ಜಾನ್ವಿ ಸ್ನೇಹ ಬೆಳೆಸಿದ್ದು ಅಶ್ವಿನಿ ಶ್ರೀಮಂತರು ಅನ್ನೋ ಕಾರಣಕ್ಕಾಗಿ ಅನ್ನೋ ಧ್ರುವಂತ್ ಮಾತಿಗೆ ಉತ್ತರ ಕೊಟ್ಟು ಹೌದು ಎಂದಿದ್ದರು. ಈ ವಿಚಾರಕ್ಕೆ ಧ್ರುವಂತ್ ಮೇಲೆ ಬೇಸರ ವ್ಯಕ್ತಪಡಿಸಿರುವ ಜಾನ್ವಿ `ಧ್ರುವಂತ್‌ಗೆ ಏನೋ ಸಮಸ್ಯೆ ಇದೆ. ಅವರ ಈ ಮಾತು ಅವರು ಎಷ್ಟೊಂದು ಗತಿಗೆಟ್ಟ ಮನಸ್ಥಿತಿಯವರು ಅನ್ನೋದನ್ನ ತೋರಿಸುತ್ತೆ. ಧ್ರುವಂತ್‌ಗೆ ವೈಯಕ್ತಿಕ ತೊಂದರೆ ಹಾಗೂ ಅನುಭವ ಏನಿದ್ಯೋ ಅದನ್ನ ನಮ್ಮ ಮೇಲೆ ಹೇರಲು ಪ್ರಯತ್ನ ಪಡ್ತಾರೆ. ಬಹುಶಃ ಧ್ರುವಂತ್ ಗತಿಗೆಟ್ಟು ಹೀಗೆ ಮಾತನಾಡುತ್ತಿದ್ದಾರೇನೋ, ನನಗೆ ಮಾಡುವುದಕ್ಕೆ ಸಾಕಷ್ಟು ಕೆಲಸ ಇದೆ. ಸಂಪಾದನೆ ಇದೆ. ನನ್ನ ಜೀವನವನ್ನ ಸ್ವಾಭಿಮಾನದಿಂದ ನಡೆಸಬಲ್ಲೆ. ಯಾರ ಆಸ್ತಿ, ಹಣಕ್ಕೂ ನಾನು ಆಸೆ ಪಡುವುದಿಲ್ಲ ಎಂದಿದ್ದಾರೆ ಜಾನ್ವಿ.
ಧ್ರುವಂತ್ ಬಗ್ಗೆ ಮಾತಿನ ಬಾಣ ಹರಿಬಿಟ್ಟ ಜಾನ್ವಿ, ನನಗೆ ನನ್ನದೇ ಆದ ಆ್ಯಡ್ ಏಜೆನ್ಸಿ ಕಂಪನಿ ಇದೆ, ನನಗೆ ಸಂಪಾದನೆಯೂ ಇದೆ. ನಾನೇ ಬೇಕಾದ್ರೆ ಧ್ರುವಂತ್‌ಗೆ ಕೆಲಸ ಕೊಡ್ತೀನಿ. ಹೀಗಾಗಿ ಅಶ್ವಿನಿಯವರ ಆಸ್ತಿ, ಹಣ ನೋಡಿ ನಾನು ಅವರ ಸ್ನೇಹ ಬೆಳೆಸಲಿಲ್ಲ. ಅಶ್ವಿನಿಯವರ ಮೆಚ್ಯುರಿಟಿ ಲೆವೆಲ್ ನನ್ನ ಮೆಚ್ಯುರಿಟಿ ಲೆವೆಲ್‌ಗೆ ಮ್ಯಾಚ್ ಆಗುತ್ತಿತ್ತು. ನಾನು ಅಶ್ವಿನಿ ಒಂಟಿಯಾಗಿ ಮನೆಗೆ ಪ್ರವೇಶ ಪಡೆದು ಆಟ ಶುರುಮಾಡಿದ್ವಿ. ಹೀಗಾಗೇ ನಮ್ಮಲ್ಲಿ ಉತ್ತಮ ಬಾಂಡಿAಗ್ ಬೆಳೆದಿತ್ತು ಅಷ್ಟೇ. ಅಶ್ವಿನಿಯವರ ಜೊತೆ ಸ್ನೇಹ ಬೆಳೆಸಿರೋದ್ರ ಹಿಂದೆ ಯಾವ ದುರುದ್ದೇಶವೂ ಇಲ್ಲ. ದುರುದ್ದೇಶ ಇದೆ ಅನ್ನೋವ್ರ ಮನಸ್ಥಿತಿಯೇ ಕೊಳಕು ಎಂದು ಪಬ್ಲಿಕ್ ಟಿವಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ.

