ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ಆಟ ಹೊರ ಬಗೆಯ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳ ಮಧ್ಯೆ ಜಟಾಪಟಿ ಜೋರಾಗಿದೆ. ಬಿಗ್ ಬಾಸ್ ಮನೆ ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಈ ವಾರ ಮನೆಯಿಂದ ಯಾರು ಹೊರ ನಡೆಯಲಿದ್ದಾರೆ ಎಂಬುದು ವೀಕ್ಷಕರ ಕೌತುಕಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಉಳಿವಿಗೆ, ನಾ ನಾ ರೀತಿಯಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಇನ್ನು ಪ್ರತಿ ವಾರದಂತೆ ಈ ವಾರ ಮನೆಯಿಂದ ಹೊರ ನಡೆಯುವ ಸ್ಪರ್ಧಿಯ ಯಾರಿರಬಹುದು ಎಂದು ಕುತೂಹಲ ಸೃಷ್ಟಿಯಾಗಿದೆ. ಈಗಾಗಲೇ ಕಿರಣ್ ಯೋಗೇಶ್ವರ್, ಸ್ಪೂರ್ತಿ ಗೌಡ ಮನೆಯಿಂದ ಹೊರನಡೆದಿದ್ದಾರೆ. ಅರ್ಜುನ್ ರಮೇಶ್ ಮತ್ತು ಲೋಕೇಶ್ ಅನಾರೋಗ್ಯದ ಹಿನ್ನಲೆ ಚಿಕಿತ್ಸೆಗಾಗಿ ಮನೆಯಿಂದ ಹೊರನಡೆದಿದ್ದಾರೆ. ಈಗಾಗಲೇ ಕಳಪೆ ಬೋರ್ಡ್ ಪಡೆದುಕೊಂಡಿರುವ ಜಯಶ್ರೀ ಆರಾಧ್ಯ ಇದೀಗ ಮನೆಯವರಿಂದ ಟಾರ್ಗೆಟ್ ಕೂಡ ಆಗಿದ್ದಾರೆ. ಇದನ್ನೂ ಓದಿ:ನಂದು -ಜಯಶ್ರೀ ಜಟಾಪಟಿ: ನಟಿ ಜಯಶ್ರೀಗೆ ಶಿಕ್ಷೆ ಕೊಟ್ಟ ಬಿಗ್ ಬಾಸ್
ಇನ್ನು ಇತ್ತೀಚಿನ ಟಾಸ್ಕ್‌ವೊಂದರಲ್ಲಿ ಜಶ್ವಂತ್ ನಂತರ ನಾಲ್ಕನೇ ವಾರದ ಕ್ಯಾಪ್ಟನ್ ಆಗಲು ಸ್ಪರ್ಧಿಗಳ ನಡುವೆ ಜಟಾಪಟಿ ನಡೆದಿದೆ. ವಾರದ ಕ್ಯಾಪ್ಟನ್ ಪಟ್ಟ ಎರಲು ಬಿಗ್ ಬಾಸ್, ಮನೆ ಮಂದಿಗೆ ತಿರುಗುವ ಕುರ್ಚಿ ಟಾಸ್ಕ್ ನೀಡಿದ್ದರು. ತಿರುಗುವ ಕುರ್ಚಿಯ ಮೇಲೆ ಪ್ರತಿ ಸ್ಪರ್ಧಿ 15 ನಿಮಿಷ ಕೂರಬೇಕು. ಸ್ಪರ್ಧಿಗೆ ಸಮಯದ ಬಗ್ಗೆ ಅರಿವಿರಬೇಕು. ಈ ವೇಳೆ ಇತರೇ ಸ್ಪರ್ಧಿಗಳು ಟಾಸ್ಕ್ ಕಂಪ್ಲೀಟ್ ಮಾಡದಂತೆ ತಡೆಯಬಹುದು. ತಿರುಗುವ ಕುರ್ಚಿ ಟಾಸ್ಕ್‌ನಲ್ಲಿ ಎಲ್ಲಾ ಸ್ಪರ್ಧಿಗಳಂತೆ ನಂದು ಕೂಡ ಭಾಗವಹಿಸಿದ್ದಾರೆ. ಈ ವೇಳೆ ನಂದು ತಿರುಗುವ ಚೇರ್‌ನಲ್ಲಿ ಕಣ್ಣು ಮುಚ್ಚಿ ಕುಳಿತು ಸಂಖ್ಯೆಗಳನ್ನ ಏಣಿಸುತ್ತಿದ್ದಾರೆ. ಟಾಸ್ಕ್ ಕಂಪ್ಲೀಟ್ ಮಾಡದಂತೆ ಈ ವೇಳೆ ಜಯಶ್ರೀ ಕಣ್ಣಿಗೆ ಸ್ಪ್ರೈ ಹೊಡೆದಿದ್ದಾರೆ. ಬಳಿಕ ಕಣ್ಣಿಗೆ ಎರಚಿದ್ದಾರೆ. ಈ ಸಮಯದಲ್ಲಿ ನಂದು ಕಣ್ಣಿಗೆ ನೋವಾಗಿದೆ. ಇತರ ಸ್ಪರ್ಧಿಗಳು, ಮಾತನಾಡಿ, ಸ್ಪ್ರೈ ಹೊಡೆಯಬೇಡಿ ಎಂದು ಹೇಳಿದ್ದರು ಜಯಶ್ರೀ ಯಾರನ್ನ ಮಾತನ್ನ ಲೆಕ್ಕಿಸದೆ ವಾದ ಮಾಡಿದ್ದಾರೆ. ಟಾಸ್ಕ್ ನಂತರ ನಂದು ಬಳಿ ಜಯಶ್ರೀ ಕ್ಷಮೆ ಕೇಳಿದ್ದರು ಕೂಡ, ನಂದು ರಿಯಾಕ್ಟ್ ಮಾಡಲಿಲ್ಲ.
ಇನ್ನು ಆಟದ ವೇಳೆ ನಂದು ಕಣ್ಣಿಗೆ ಸ್ಪ್ರೈ ಹಾಕಿದ್ದು, ಜಯಶ್ರೀಗೆ ಮುಳುವಾಗಿತ್ತು. ಜೊತೆಗೆ ಆಟದ ವೇಳೆ ಮೈಕ್‌ಗೆ ನೀರು ಹಾಕಿ ಜಯಶ್ರೀ ಹಾನಿ ಮಾಡಿದ್ದರು. ಹಾಗಾಗಿ ಈ ವಾರ ಎಲಿಮಿನೇಟ್ ಆಗದೇ ಉಳಿದರೆ ಮುಂದಿನ ವಾರ ಕೂಡ ಜಯಶ್ರೀ ನೇರ ನಾಮಿನೇಟ್ ಆಗುವುದಾಗಿ ಬಿಗ್ ಬಾಸ್ ತಿಳಿಸಿದ್ದಾರೆ. ಮನೆಯಲ್ಲಿರುವ ರೀತಿಯ ಜತೆಗೆ ಜಯಶ್ರೀ ಅವರ ಒರಟುತನ ಈ ಎಲ್ಲಾ ಕಾರಣಾದಿಂದಾಗಿ ಜಯಶ್ರೀ ಈ ವಾರ ಬಿಗ್ ಬಾಸ್ ಮನೆಯಿಂದ ಹೊರನಡೆಯಲಿದ್ದಾರಾ ಎಂಬುದನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]