ಡ್ರೋನ್ ತಯಾರಿಕೆಗೆ ಬಂದ ಹಣವೆಷ್ಟು? ರಿವೀಲ್ ಮಾಡಿದ್ರು ಪ್ರತಾಪ್

Public TV
1 Min Read
drone prathap 1 2

ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಮೊದಲ ದಿನದಿಂದಲೂ ಡ್ರೋನ್ ಪ್ರತಾಪ್ (Drone Prathap) ಅವರು ಟಾರ್ಗೆಟ್ ಆಗುತ್ತಲೇ ಬಂದಿದ್ದಾರೆ. ಇದೀಗ ಡ್ರೋನ್ ಬಗೆಗಿನ ವಿಚಾರವಾಗಿ ಚರ್ಚೆ ನಡೆದಿದೆ. ಡ್ರೋನ್ ಬಗ್ಗೆ ಸಾಲು ಸಾಲು ಪ್ರಶ್ನೆಗಳು ಪ್ರತಾಪ್‌ಗೆ ಎದುರಾಗಿದೆ. ಈ ವೇಳೆ, ಡ್ರೋನ್ ತಯಾರಿಕೆಗೆ ಬಂದ ಹಣವೆಷ್ಟು? ಎಂಬುದನ್ನ ಪ್ರತಾಪ್ ರಿವೀಲ್ ಮಾಡಿದ್ದಾರೆ.

drone prathap 1 1

ಮತ್ತೆ ಡ್ರೋನ್ ವಿಚಾರವಾಗಿ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ನಡೆದಿದೆ. ಈ ಹಿಂದಿನ ಡ್ರೋನ್ ಪ್ರತಾಪ್ ಅವರ ಸೋಷಿಯಲ್ ಮೀಡಿಯಾ ಟೀಕೆಗಳ ಬಗ್ಗೆ ಡ್ರೋನ್ ಬಗ್ಗೆ ಮಾತುಕತೆ ನಡೆದಿದೆ. ಈ ವೇಳೆ ವಿನಯ್ (Vinay), ನಿಮ್ಮನ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡ್ತಿದ್ದೀನಿ. ಡ್ರೋನ್ ಪ್ರತಾಪ್ ಅಂದರೆ ನೆಗೆಟಿವ್ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಅದ್ದೂರಿಯಾಗಿ ನೆರವೇರಿತು ಕಾರ್ತಿಕ್ ತಂಗಿ ತೇಜಸ್ವಿನಿ ಸೀಮಂತ

drone prathap 4

ಕಾಲೇಜ್ ಮುಗಿಸಿದ ಮೇಲೆ ನಿಮಗೆ ಡ್ರೋನ್ ಮೇಲೆ ಆಸಕ್ತಿ ಬಂತು ಅಲ್ವಾ. ಇದರ ಮೇಲೆ ನಿಮಗೆ ಯಾರು ಬಂಡವಾಳ ಹಾಕಿದ್ರು ಎಂದು ವಿನಯ್ ಪ್ರತಾಪ್‌ಗೆ ಕೇಳಿದ್ದಾರೆ. ಸಂಸ್ಥೆಯೊಂದು ಬಂಡವಾಳ ಹೂಡಿದೆ ಎಂದು ರಿಯಾಕ್ಟ್ ಮಾಡಿದ್ರು. ಎಷ್ಟು ಎಂದಾಗ? ಒಂದು ನಿರ್ದಿಷ್ಟ ಹಣವನ್ನು ನೀಡಿದೆ ಎಂದು ಪ್ರತಾಪ್ ಉತ್ತರಿಸಿದ್ದರು. 10 ಲಕ್ಷಕ್ಕಿಂತ ಜಾಸ್ತಿನಾ ಎಂದು ಸ್ನೇಹಿತ್ ಕೇಳಿದ್ದಾರೆ. ಅದಕ್ಕಿಂತ ಸ್ವಲ್ವ ಕಮ್ಮಿ ಎಂದು ಹೇಳುವ ಮೂಲಕ ಡ್ರೋನ್‌ ತಯಾರಿಕೆಗೆ ಬಂದ ಹಣದ ಬಗ್ಗೆ ಪ್ರತಾಪ್‌ ರಿವೀಲ್‌ ಮಾಡಿದ್ದಾರೆ.

ಬಿಗ್ ಬಾಸ್ ಮನೆಯ (Bigg Boss House) ಆಟ ಈಗ 3 ವಾರಗಳನ್ನ ಪೂರೈಸಿದೆ. ಈಗಾಗಲೇ ಇಬ್ಬರೂ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಈ ವಾರ ಯಾರಿಗೆ ದೊಡ್ಮನೆಯ ಆಟ ಅಂತ್ಯವಾಗಲಿದೆ ಎಂದು ಕಾದುನೋಡಬೇಕಿದೆ.

Share This Article