ಬಿಗ್‌ಬಾಸ್ ಸೀಸನ್-12, 100ನೇ ದಿನದತ್ತ ದಾಪುಗಾಲಿಟ್ಟಿದೆ. ದಿನದಿಂದ ದಿನಕ್ಕೆ ಬಿಗ್‌ಬಾಸ್ ಮನೆ ರಣರಂಗವಾಗ್ತಿದೆ. ಸ್ಪರ್ಧಿಗಳ ಮಧ್ಯೆ ಬಿರುಸಿನ ಸೆಣಸಾಟ ಶುರುವಾಗಿದ್ದು, ಒಬ್ಬರನ್ನ ಕಂಡರೇ ಮತ್ತೊಬ್ಬರು ಉರಿದು ಬೀಳ್ತಿದ್ದಾರೆ.
View this post on Instagram
ಕಳೆದ ವಾರ ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದ ಗಿಲ್ಲಿ ನಟನ ಮೇಲೆ ಮನೆಮಂದಿ ಸಾಲು ಸಾಲು ಆರೋಪ ಹೊರಿಸಿದ್ದಾರೆ. ಕಿಚ್ಚ ಸುದೀಪ್ ಮುಂದೆ ಬಿಗ್‌ಬಾಸ್ ಸ್ಪರ್ಧಿಗಳು ಗಿಲ್ಲಿ ಕ್ಯಾಪ್ಟನ್ ಆದ ವಾರ ಮನೆ ಹೇಗಿತ್ತು ಎನ್ನುವ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ರೀಲ್ಸ್ ಮಾಡಿ ಕೋಟಿ ರೂಪಾಯಿ ಬಹುಮಾನ ಗೆಲ್ಲಿ – ‘ಕೊರಗಜ್ಜ’ ಚಿತ್ರತಂಡದ ಆಫರ್‌ಗೆ ದೈವ ನರ್ತಕರ ಆಕ್ರೋಶ

ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಬಿಗ್‌ಬಾಸ್ ಮನೇಲಿ ತಮ್ಮ ಅಸ್ತಿತ್ವಕ್ಕಾಗಿ ಜೋರು ಜಗಳ, ಕದನ, ಕಿತ್ತಾಟ ಸಹಜವಾಗಿಯೇ ತಾರಕಕ್ಕೇರಿವೆ. ಅದ್ರಲ್ಲೂ ಗಿಲ್ಲಿ ಹಾಗೂ ಅಶ್ವಿನಿ ಹಾವು ಮುಂಗುಸಿಯಂತೆ ಕಿತ್ತಾಟಕ್ಕಿಳಿದಿದ್ದಾರೆ. ಹಾಗಾಗಿ ರೋಚಕ ವಾತಾವರಣವೇ ಸೃಷ್ಟಿಯಾಗಿದೆ. ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಹಲಾವರು ವಿಚಾರಗಳು ಚರ್ಚೆಯ ವಿಷಯವಾಗಿವೆ. ಆದ್ರಲ್ಲೂ ಗಿಲ್ಲಿಯ ನಿಭಾಯಿಸಿದ ಕ್ಯಾಪ್ಟನ್ಸಿ ಮೇಲೆ ಎಲ್ಲರೂ ದೂರಿದ್ದಾರೆ. ಇದನ್ನೂ ಓದಿ: ಟಾಕ್ಸಿಕ್ ಚಿತ್ರದ ರೆಬೆಕಾ ಪಾತ್ರದಲ್ಲಿ ತಾರಾ ಸುತಾರಿಯಾ

ಬಿಗ್‌ಬಾಸ್ ಮನೆಯ ಎಂಟರ್ಟೈನರ್ ಎನಿಸಿಕೊಂಡಿರುವ ಗಿಲ್ಲಿ ಅಷ್ಟೆ ಬೇಜವಾಬ್ದಾರಿ, ಸೋಮಾರಿಯೂ ಹೌದು. ಕ್ಯಾಪ್ಟನ್ ಜೊತೆಗೆ ಟಾಸ್ಕ್‌ಗಳಲ್ಲಿ ಉಸ್ತುವಾರಿ ಸಹ ವಹಿಸಿದ್ದರು. ಇದೀಗ ಸುದೀಪ್ ಅವರು ವೀಕೆಂಡ್ ಎಪಿಸೋಡ್‌ಗೆ ಮರಳಿದ್ದು, ಗಿಲ್ಲಿಯ ಕ್ಯಾಪ್ಟೆನ್ಸಿ ಬಗ್ಗೆ ಮನೆ ಸದಸ್ಯರ ಅಭಿಪ್ರಾಯ ಪಡೆದಿದ್ದಾರೆ.

ಮನೆಯ ಬಹುತೇಕ ಸದಸ್ಯರೂ ಸಹ ಗಿಲ್ಲಿಯ ಕ್ಯಾಪ್ಟೆನ್ಸಿ ಬಗ್ಗೆ ದೂರುಗಳನ್ನು ಹೇಳಿದ್ದಾರೆ. ಗಿಲ್ಲಿ ಬೇಜವಾಬ್ದಾರಿ ಎಂದೂ, ಅಹಂ ತೋರಿಸಿದ್ದಾರೆ ಎಂದು, ಪಕ್ಷಪಾತ ಮಾಡಿದ್ದಾರೆ ಎಂದು ಹೀಗೆ ಒಬ್ಬರ ಬಳಿಕ ಒಬ್ಬರು ದೂರುಗಳನ್ನು ಹೇಳಿದ್ದಾರೆ. ಇದು ಗಿಲ್ಲಿಯ ಆಟದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋದು ಕೂಡಾ ಮುಖ್ಯವಾಗುತ್ತೆ. ಇದನ್ನೂ ಓದಿ: ನಿಯಮ ಉಲ್ಲಂಘಿಸಿದ್ರೂ ಮನೆ ಮಂದಿಯ ಸಹಾಯದಿಂದ ಮತ್ತೆ ನಾಯಕನಾದ ಧನುಷ್

