ಇವತ್ತು ಹಿಂದಿ ಮತ್ತು ಕನ್ನಡ ಬಿಗ್ ಬಾಸ್ (Bigg Boss Hindi) ಫಿನಾಲೆ ಹಂತವನ್ನು ಪೂರೈಸುತ್ತಿದೆ. ನಿನ್ನೆಯಿಂದಲೇ ಫಿನಾಲೆ ಕಾರ್ಯಕ್ರಮಗಳು ಚಿತ್ರೀಕರಣಗೊಳ್ಳುತ್ತಿವೆ ಮತ್ತು ಪ್ರಸಾರವಾಗುತ್ತಿವೆ. ಅಂತಿಮವಾಗಿ ಟ್ರೋಫಿ ಎತ್ತುವವರು ಯಾರು ಎನ್ನುವ ಕುತೂಹಲಕ್ಕೆ ಇಂದು ರಾತ್ರಿ ತೆರೆ ಬೀಳಲಿದೆ.
ಹೆಮ್ಮೆ ಪಡಬೇಕಾದ ಸಂಗತಿ ಏನೆಂದರೆ ಹಿಂದಿಯಲ್ಲಿ ನಡೆಯುತ್ತಿರುವ ಬಿಗ್ ಬಾಸ್ ನಲ್ಲಿ ಕನ್ನಡದ ಹುಡುಗ ಅರುಣ್ ಮಾಶೆಟ್ಟಿ (Arun Mashetti) ಕೂಡ ಭಾಗಿಯಾಗಿದ್ದು, ಅಂತಿಮ ಐದರ ಸ್ಥಾನವನ್ನೂ ಅವರು ಪಡೆದುಕೊಂಡಿದ್ದಾರೆ. ಹಾಗಾಗಿ ತಮ್ಮೂರಿನ ಹುಡುಗ ಬಿಗ್ ಬಾಸ್ ಗೆದ್ದು ಬರಲಿ ಎಂದು ಊರಿನ ಜನತೆ ಶುಭ ಹಾರೈಸಿದ್ದಾರೆ.
ಅರುಣ್ ಮಾಶೆಟ್ಟಿ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ರಾಷಪ್ಪ ಗೌಡಗಾಂವ ಗ್ರಾಮದವರು. ಯೂಟ್ಯೂಬರ್ ಆಗಿರುವ ಇವರು ಬೀದರ್ ಭಾಷೆಯಲ್ಲಿ ವಿಡಿಯೋಗಳನ್ನು ಮಾಡಿಕೊಂಡು ಹೆಸರಾದವರು. ಬಿಗ್ ಬಾಸ್ ನಲ್ಲೂ ಆಗಾಗ್ಗೆ ಕನ್ನಡವನ್ನು ಮಾತನಾಡಿದ್ದೂ ಇದೆ.
ಮೂಲತಃ ಕರುನಾಡಿವರಾದರು, ನೆಲೆಯೂರಿದ್ದು ಹೈದರಾಬಾದ್ ನಲ್ಲಿ. ಆದರೂ, ಕನ್ನಡವನ್ನು ಅವರು ಮರೆತಿಲ್ಲ. ಸಲ್ಮಾನ್ ಖಾನ್ (Salman Khan) ಎದುರಲ್ಲೇ ಕನ್ನಡವನ್ನು ಮಾತನಾಡಿ ಅಭಿಮಾನ ಮರೆದವರು.