ಬೆಂಗಳೂರು: ಬಿಗ್ಬಾಸ್ ಕನ್ನಡ 7ರ ವಿನ್ನರ್ ಆಗಿ ಶೈನ್ ಶೆಟ್ಟಿ ಹೊರ ಹೊಮ್ಮಿದ್ದು, ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ.
ಬಿಗ್ಬಾಸ್ ವೇದಿಕೆಯಲ್ಲಿ ಭಾನುವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಟ ಕಿಚ್ಚ ಸುದೀಪ್ ಅವರು ತಮ್ಮ ಎಡಗಡೆ ನಿಂತಿದ್ದ ಶೈನ್ ಶೆಟ್ಟಿ ಅವರ ಕೈಯನ್ನು ಎತ್ತಿ ವಿಜೇತರೆಂದರು ಘೋಷಿಸಿದರು. ಇದೇ ವೇಳೆ ಸುದೀಪ್ ಬಲಕ್ಕೆ ನಿಂತಿದ್ದ ಪ್ರಬಲ ಸ್ಪರ್ಧಿ ಕುರಿ ಪ್ರತಾಪ್ ರನ್ನರ್ ಅಪ್ ಆದರು.
Advertisement
Advertisement
18 ಬಿಗ್ ಸ್ಪರ್ಧಿಗಳಿಂದ ಆರಂಭವಾಗಿದ್ದ ಬಿಗ್ ಬಾಸ್ ಸೀಸನ್ 7ನಲ್ಲಿ ಅಂತಿಮ ವಾರದಲ್ಲಿ 5 ಸ್ಪರ್ಧಿಗಳು ಉಳಿದುಕೊಂಡಿದ್ದರು. 113 ದಿನಗಳನ್ನು ಕಳೆದಿರುವ ವಿನ್ನರ್ ಶೈನ್ ಶೆಟ್ಟಿ ಅವರಿಗೆ ನಿಗದಿ ಪಡಿಸಿದ್ದ 50 ಲಕ್ಷ ರೂ. ಹಾಗೂ ಸಂಭಾವನಿ ಮೊತ್ತವಾಗಿ 11 ಸೇರಿ ಒಟ್ಟು 61 ಲಕ್ಷ ರೂ. ನೀಡಲಾಗಿದೆ. ಅದರೊಂದಿಗೆ ಬಿಗ್ ಬಾಸ್ ಸೀಸನ್ 7 ವಿನ್ನರ್ ಪಟ್ಟ ದೊರೆತಿದೆ. ಕುರಿ ಪ್ರತಾಪ್ ಅವರಿಗೆ ರನ್ನರ್ ಕಿರೀಟ ದೊರೆಯಲಿದೆ.
Advertisement
ಶೈನ್, ವಾಸುಕಿ ಮತ್ತು ಕುರಿ ಪ್ರತಾಪ್ ಮಧ್ಯೆ ಭರ್ಜರಿ ಸ್ಪರ್ಧೆ ನಡೆದಿತ್ತು. ಟಾಪ್ 2ನಲ್ಲಿ ವಾಸುಕಿ ವೈಭವ್ ಇರುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅವರು ಭೂಮಿ, ದೀಪಿಕಾ ದಾಸ್ ಬಳಿಕ ಭಾನುವಾರದ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ಹೀಗಾಗಿ ವಾಸುಕಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
Advertisement
ಕುರಿ ಪ್ರತಾಪ್ ಅವರು ತಮ್ಮ ಕಾಮಿಡಿ ಮೂಲಕ ಬಿಗ್ ಮನೆಯಲ್ಲಿ ಸಾಕಷ್ಟು ಮನರಂಜನೆ ನೀಡಿದ್ದರು. ಈ ಮೂಲಕ ಸಾಕಷ್ಟು ಅಭಿಮಾನಿಗಳು ಗಳಿಸಿಕೊಂಡಿದ್ದಾರೆ. ಇತ್ತ ಶೈನ್ ಶೆಟ್ಟಿ ಅವರಿಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಾಗಿ ಇಬ್ಬರ ಮಧ್ಯೆ ಬಿಗ್ ಪೈಟ್ ನಡೆದಿತ್ತು. ಕೊನೆಗೆ ಆಲ್ರೌಂಡರ್ ಶೈನ್ ಶೆಟ್ಟಿ ಬಿಗ್ ಬಾಸ್ ಕನ್ನಡ 7ರ ವಿನ್ನರ್ ಆಗಿ ಶೈನ್ ಶೆಟ್ಟಿ ಹೊರ ಹೊಮ್ಮಿದ್ದಾರೆ.