‘ಬಿಗ್ ಬಾಸ್’ (Bigg Boss Kannada 10) ಕನ್ನಡ ಸೀಸನ್ 10ರ ಶೋ ಮೂಲಕ ಮನೆ ಮಾತಾದ ನಟ ವಿನಯ್ ಗೌಡ (Vinay Gowda) ಈಗೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಫ್ಯಾನ್ಸ್ ಉತ್ತರ ಸಿಕ್ಕಿದೆ. ಸಾಲು ಸಾಲು ಸಿನಿಮಾಗಳಿಗೆ ವಿನಯ್‌ಗೆ ನಟಿಸಲು ಭರ್ಜರಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ದೊಡ್ಮನೆ ಆಟಕ್ಕೆ ತೆರೆ ಬಿದ್ದು 4 ತಿಂಗಳುಗಳಾಗಿವೆ. ಆದರೆ ವಿನಯ್ ಮುಂಬರುವ ಸಿನಿಮಾಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಈಗ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಕನ್ನಡದ 2 ಬಿಗ್ ಪ್ರಾಜೆಕ್ಟ್‌ಗಳಿಗೆ ಬುಕ್ ಆಗಿದ್ದಾರೆ. ಜೊತೆ ಸೌತ್ ಸಿನಿಮಾಗಳ ಮಾತುಕತೆ ನಡೆಯುತ್ತಿದೆ.
ಕನ್ನಡದ 2 ದೊಡ್ಡ ಪ್ರಾಜೆಕ್ಟ್‌ಗೆ ಈಗಾಗಲೇ ವಿನಯ್ ಸಹಿ ಹಾಕಿದ್ದಾರೆ. ತಮಿಳು ಮತ್ತು ತೆಲುಗಿನಲ್ಲಿ ನಟಿಸಲು ಅವರಿಗೆ ಬುಲಾವ್ ಬಂದಿದೆ. ಈ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ.
ಅದೆಷ್ಟೇ ಅಲ್ಲ, ಸಿನಿಮಾವೊಂದರಲ್ಲಿ ಹೀರೋ ಆಗಿ ನಟಿಸಲು ಅವಕಾಶ ಸಿಕ್ಕಿದೆ. ಸದ್ಯದಲ್ಲೇ ನಿರ್ಮಾಣ ಸಂಸ್ಥೆಯಿಂದ ಅಧಿಕೃತ ಮಾಹಿತಿ ಹೊರಬೀಳಲಿದೆ. ನಟನೆಗೆ ಅವಕಾಶವಿರಬೇಕು. ವಿಲನ್ ಆಗಿ ನಟಿಸಬೇಕು ಎಂಬ ವಿನಯ್‌ಗೆ ಕನಸಿತ್ತು ಅದರಂತೆಯೇ ಉತ್ತಮ ಅವಕಾಶ ಸಿಕ್ಕಿದೆ. ಸದ್ಯದಲ್ಲೇ ಯಾವ ಸಿನಿಮಾ? ಎಂಬ ಅಧಿಕೃತ ಮಾಹಿತಿ ಹೊರಬೀಳಲಿದೆ. ಇದನ್ನೂ ಓದಿ:ಸಿಂಹಿಣಿ ಸಂಗೀತಾ ಕ್ಯಾಮೆರಾದಲ್ಲಿ ಸೆರೆಯಾದ ಹುಲಿ
ಈ ಹಿಂದೆ ಅಂಬಾರಿ, ಹರಹರ ಮಹಾದೇವ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಶೋ ಅವರಿಗೆ ಹೆಚ್ಚಿನ ಜನಪ್ರಿಯತೆ ಕೊಟ್ಟಿದೆ.