ರೀಲ್ಸ್ ತಂದ ಸಂಕಷ್ಟ: ವಿಚಾರಣೆಗೆ ಜೊತೆಯಾಗಿ ಹಾಜರಾದ ವಿನಯ್, ರಜತ್

Public TV
1 Min Read
rajath vinay

ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ’ಬಿಗ್ ಬಾಸ್’ (Bigg Boss) ಖ್ಯಾತಿಯ ರಜತ್ (Rajath) ಮತ್ತು ವಿನಯ್ ಗೌಡ (Vinay Gowda) ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಬಸವೇಶ್ವರ ನಗರದ ಪೊಲೀಸ್ ಠಾಣೆಗೆ ಜೊತೆಯಾಗಿ ವಿನಯ್ ಮತ್ತು ರಜತ್ ವಿಚಾರಣೆಗೆ ಹಾಜರಾಗಿದ್ದಾರೆ.

vinay gowda rajath

ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ನಿನ್ನೆ (ಮಾ.24) ವಿನಯ್ ಮತ್ತು ರಜತ್‌ರನ್ನು ವಿಚಾರಣೆಯ ವೇಳೆಯೇ ಬಂಧಿಸಲಾಗಿತ್ತು. ಆ ನಂತರ ಇಬ್ಬರನ್ನೂ ಮಧ್ಯರಾತ್ರಿಯೇ ಬಿಡುಗಡೆ ಮಾಡಲಾಯಿತು. ಈ ಹಿನ್ನೆಲೆ ಪೊಲೀಸರ ಸೂಚನೆಯಂತೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ:ಗುಡ್‌ ನ್ಯೂಸ್‌ ಕೊಟ್ಟ ‘ದಿ ವಿಲನ್‌’ ನಟಿ- ಆ್ಯಮಿ ಜಾಕ್ಸನ್‌ಗೆ ಗಂಡು ಮಗು

ಅಂದಹಾಗೆ, ಮಚ್ಚು ಹಿಡಿದರುವ ರೀಲ್‌ನಲ್ಲಿ ‘ಕರಿಯ’ ಚಿತ್ರದ ದರ್ಶನ್ ಸ್ಟೈಲ್‌ನಲ್ಲಿ ರಜತ್ ಕಾಣಿಸಿಕೊಂಡಿದ್ರೆ, ಪುಷ್ಪರಾಜ್ ಲುಕ್‌ನಲ್ಲಿ ವಿನಯ್ ಕಾಣಿಸಿಕೊಂಡು ಒಟ್ಟಾಗಿ ರೀಲ್ಸ್ ಮಾಡಿದ್ದರು. ಈ ರೀಲ್ಸ್ ಇದೀಗ ಅವರಿಗೆ ಸಂಕಷ್ಟ ತಂದಿದೆ. ಲಾಂಗ್‌ ಹಿಡಿದಿಕ್ಕೆ ಇಬ್ಬರ ಮೇಲೆಯೂ ಎಫ್‌ಐಆರ್ ದಾಖಲಾಗಿದೆ. ಸದ್ಯ ಈ ಸಂಬಂಧ ರಜತ್ ಮತ್ತು ವಿನಯ್ ಬಸವೇಶ್ವರ ನಗರದ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

Share This Article