ಬಿಗ್ ಬಾಸ್ ಬೆಡಗಿ ತನಿಷಾ ಕುಪ್ಪಂಡ (Tanisha Kuppanda) ಅವರು ದೊಡ್ಮನೆ ಆಟ ಮುಗಿದ ಮೇಲೆ ಭಾರೀ ಬೇಡಿಕೆ ಇದೆ. ಸಿನಿಮಾ, ಬ್ಯುಸಿನೆಸ್ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಪೊಲೀಸ್ ಅವತಾರದಲ್ಲಿ ತನಿಷಾ ಕುಪ್ಪಂಡ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ತನಿಷಾ ಕುಪ್ಪಂಡ ಖಡಕ್ ಮಾತುಗಳ ಮೂಲಕ ಗಮನ ಸೆಳೆದ ನಟಿ. ಬಿಗ್ ಬಾಸ್ ಮನೆಯ ಬೆಂಕಿ ಎಂದೇ ಹೈಲೆಟ್ ಆಗಿರೋ ತನಿಷಾ ಕಾಕಿ ತೊಟ್ಟು ದುಷ್ಟರಿಗೆ ಕ್ಲ್ಯಾಸ್ ತೆಗೆದುಕೊಳ್ಳೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:‘ಸೀರೆ’ ಹಿಂದೆ ಬಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ಕನ್ನಡತಿ ಹೀರೋ ಕಿರಣ್ ರಾಜ್ (Kiran Raj) ನಟನೆಯ ‘ಶೇರ್’ (Sherr) ಸಿನಿಮಾದಲ್ಲಿ ತನಿಷಾ ಕುಪ್ಪಂಡ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ನಟಿಯೇ ಸ್ವತಃ ಅಪ್‌ಡೇಟ್ ನೀಡಿದ್ದಾರೆ. ನಟಿಯ ಖದರ್ ನೋಡಿ ಫ್ಯಾನ್ಸ್ ವಾವ್ ಎಂದಿದ್ದಾರೆ. ನಿಮ್ಮ ಗೆಟಪ್ ಬೆಂಕಿ ಎಂದು ತನಿಷಾಗೆ ಮೆಚ್ಚುಗೆ ಸೂಚಿಸಿದ್ದಾರೆ.
ನಿಮ್ಮ ಶತ್ರುವಿಗಾಗಿ ನೀವು ಹೊತ್ತಿಸುವ ಬೆಂಕಿಯು ಅವರಿಗಿಂತ ಹೆಚ್ಚಾಗಿ ನಿಮ್ಮನ್ನು ಸುಡುತ್ತದೆ ಎಂದು ನಟಿ ಅಡಿಬರಹ ನೀಡಿದ್ದಾರೆ. ಪೊಲೀಸ್ ಅವತಾರದಲ್ಲಿರುವ ವಿವಿಧ ಭಂಗಿಯ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ಸೆಕ್ಸಿಯಾಗಿ ಡಾನ್ಸ್ ಮಾಡಲಾರೆ: ನಟಿ ಸಮಂತಾ ಘೋಷಣೆ
ಅಂದಹಾಗೆ ತನಿಷಾ, ಕಾರ್ತಿಕ್ ಜೊತೆ ಹೊಸ ಸಿನಿಮಾ ಮತ್ತು ವರ್ತೂರು ಸಂತೋಷ್ ಚಿತ್ರಕ್ಕೆ ನಟಿ ನಿರ್ಮಾಣ ಮಾಡೋದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.