‘ಬಿಗ್ ಬಾಸ್’ (Bigg Boss) ಖ್ಯಾತಿಯ ಸೋನು ಗೌಡ (Sonu Srinivas Gowda) ಹೊಸ ರೀಲ್ಸ್‌ವೊಂದನ್ನು ಹಂಚಿಕೊಂಡಿದ್ದಾರೆ. ಚೆಂದದ ಹಾಡೋದಕ್ಕೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಚಡ್ಡಿ ಧರಿಸಿ ಕುಣಿದ ಸೋನುರನ್ನು ನೋಡಿ ಪಡ್ಡೆಹುಡುಗರು ದಂಗಾಗಿದ್ದಾರೆ. ಇದನ್ನೂ ಓದಿ:‘ಈಗ 2’ ಬರುವ ಬಗ್ಗೆ ನಾನಿ ಕೊಟ್ರು ಇಂಟರೆಸ್ಟಿಂಗ್ ಅಪ್‌ಡೇಟ್
ಸೋಶಿಯಲ್ ಮೀಡಿಯಾದಲ್ಲಿ ಬಗೆ ಬಗೆಯ ರೀಲ್ಸ್ ಮಾಡುವ ಮೂಲಕ ಫೇಮಸ್ ಆಗಿರುವ ಸೋನು ಇತ್ತೀಚೆಗೆ ಗೋವಾ ವೆಕೇಷನ್‌ಗೆ ಹೋಗಿದ್ದರು. ಈ ವೇಳೆ, ಶೂಟ್ ಮಾಡಿದ್ದ ರೀಲ್ಸ್ ಅನ್ನು ಈಗ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
View this post on Instagram
‘ನೆನೆಪಿರಲಿ’ ಸಿನಿಮಾದ ‘ಹಾಡಿಗೆ ಹೃದಯ ಬಯಸುವ ಸುಖದ ಚಿತ್ರಕ್ಕೆ’ ಎಂದು ನಟಿ ಕುಣಿದು ಕುಪ್ಪಳಿಸಿದ್ದಾರೆ. ಶಾರ್ಟ್ ಶರ್ಟ್ ಮತ್ತು ಶಾರ್ಟ್ ಆಗಿರೋ ಜೀನ್ಸ್ ಅನ್ನು ಧರಿಸಿದ್ದಾರೆ. ಸುನಾಮಿ ಬಂದ್ರೂ ಕೂಡ ನೀವು ಡ್ಯಾನ್ಸ್ ಮಾಡೋದು ಮಾತ್ರ ಬಿಡಲ್ಲ ಅಲ್ವಾ? ಎಂದು ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಹಾಕಿದ್ದಾರೆ.
ಇನ್ನೂ ಮಾರ್ಚ್ 22ರಂದು ಅಕ್ರಮವಾಗಿ ಮಗುವೊಂದನ್ನು ದತ್ತು ಪಡೆದ ವಿಚಾರವಾಗಿ 11 ದಿನಗಳ ಕಾಲ ನಟಿ ಸೋನು ಬಂಧನದಲ್ಲಿದ್ದರು. ಆ ನಂತರ ಬಿಡುಗಡೆಯಾದರು.
ಅಂದಹಾಗೆ, `ಕ್ಯಾಡ್ಬರೀಸ್’ ಸಿನಿಮಾದಲ್ಲಿ ಸೋನು ಶ್ರೀನಿವಾಸ್ ಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಐಟಂ ಹಾಡಿಗೆ ನಟಿ ಹೆಜ್ಜೆ ಹಾಕಿದ್ದಾರೆ. ಧರ್ಮ ಕೀರ್ತಿರಾಜ್, ಅದ್ವಿತಿ ಶೆಟ್ಟಿ ನಟನೆಯ ಸಿನಿಮಾ ಇದಾಗಿದೆ. ಈ ಚಿತ್ರದ ರಿಲೀಸ್‌ಗೆ ಸೋನು ಎದುರು ನೋಡ್ತಿದ್ದಾರೆ.