ಗೃಹಪ್ರವೇಶದ ಸಂಭ್ರಮದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಸೋನು ಗೌಡ

Public TV
1 Min Read
sonu gowda

‘ಬಿಗ್ ಬಾಸ್ ಕನ್ನಡ ಒಟಿಟಿ 1’ರ (Bigg Boss) ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಕನಸಿನ ಮನೆಗೆ ಇಂದು (ನ.13) ಕಾಲಿಟ್ಟಿದ್ದಾರೆ. ನಟಿ ಗೃಹಪ್ರವೇಶದ (House Warming) ಸಂಭ್ರಮದಲ್ಲಿದ್ದಾರೆ. ಕಂಡ ಕನಸನ್ನು ನನಸು ಮಾಡಿಕೊಂಡಿದಕ್ಕೆ ಸೋನುಗೆ ಫ್ಯಾನ್ಸ್ ಶುಭಕೋರಿದ್ದಾರೆ.

sonu

ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ರೀಲ್ಸ್ ಮೂಲಕ ಗಮನ ಸೆಳೆಯುತ್ತಿದ್ದ ಸೋನು ಗ್ರ್ಯಾಂಡ್ ಆಗಿ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗ್ರಾಮವೊಂದರಲ್ಲಿ ಹೊಸ ಮನೆ ಕಟ್ಟಿಸಿದ್ದಾರೆ. ನಟಿಯ ಹೊಸ ಮನೆಯ ಶುಭಾರಂಭಕ್ಕೆ ‘ಲಕ್ಷ್ಮಿ ನಿವಾಸ’ ಸೀರಿಯಲ್‌ನ ಬಾಲನಟಿ ನಿಶಿತಾ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಕೇಸ್‌; ನಟನ ಕುರಿತು ಹಾಡು ಬರೆದಿದ್ದ ರಾಯಚೂರಿನ ಯುವಕ ಬಂಧನ

sonu gowda 1

ಇತ್ತೀಚೆಗೆ ಸೋನು ಅವರ ಯೂಟ್ಯೂಬ್‌ನಲ್ಲಿ ಮದುವೆ ಬಗ್ಗೆ ಮಾತನಾಡಿದರು. ಸದ್ಯದಲ್ಲೇ ನನ್ನ ಮದುವೆ ಬಗ್ಗೆ ಅನೌನ್ಸ್ ಮಾಡುತ್ತೀನಿ. ಎಲ್ಲರ ಮದುವೆ ನೋಡಿ ನೋಡಿ ನನಗೂ ಮದುವೆ ಆಗಬೇಕು ಅಂತ ಅನಿಸುತ್ತಿದೆ ಎಂದಿದ್ದರು. ಆದರೆ ಹುಡುಗ ಯಾರು ಅಂತ ಅವರು ರಿವೀಲ್ ಮಾಡಿರಲಿಲ್ಲ.

sonu 1

ಕುಟುಂಬಸ್ಥರು ನಿಶ್ಚಿಯಿಸಿದ ಅರೇಂಜ್ ಮ್ಯಾರೇಜ್ ಇದಾಗಿದೆ. ಹುಡುಗನ ಕಡೆಯವರು ನಮ್ಮ ಕುಟುಂಬಸ್ಥರನ್ನು ಅಪ್ರೋಚ್ ಮಾಡಿದರು. ಒಳ್ಳೆಯ ಹುಡುಗ, ಒಳ್ಳೆಯ ಸಂಬಂಧ ಇದಾಗಿದ್ದು, ನನ್ನ ತಾಯಿ ಸಮ್ಮತಿ ಸೂಚಿಸಿದರು. ಹಾಗಾಗಿ ನಾನು ಕೂಡ ಈ ಮದುವೆಗೆ ಒಪ್ಪಿಕೊಂಡೆ. ಒಳ್ಳೆಯ ಸಂಬಂಧ ಅಂದರೆ ನಾನ್ಯಾಕೆ ಒಪ್ಪಿಕೊಳ್ಳಬಾರದು ಎನಿಸಿತು. ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದರೆ ಅದು ಸರಿಯಾದ ನಿರ್ಣಯ ಆಗಿರುತ್ತದೆ ಎಂಬ ನಂಬಿಕೆಯಿದೆ ಎಂದು ಸೋನು ಮದುವೆ ಕುರಿತು ಮಾತನಾಡಿದರು.

sonu

ಇನ್ನೂ ಸೋನು ಮದುವೆಯಾಗುತ್ತಿರುವ ವರ ಮೂಲತಃ ಬೆಂಗಳೂರಿನವರು. ಇದೀಗ ಅವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ನಮ್ಮೀಬ್ಬರ ಎಂಗೇಜ್‌ಮೆಂಟ್ ನಡೆಯಲಿದೆ. ಮುಂದಿನ ವರ್ಷ ನಮ್ಮ ಮದುವೆ ಎಂದು ತಿಳಿಸಿದರು. ಆದರೆ ವರನ ಹೆಸರನ್ನು ಅವರು ರಿವೀಲ್ ಮಾಡಿಲ್ಲ. ಸದ್ಯದಲ್ಲೇ ಅಧಿಕೃತವಾಗಿ ತಿಳಿಸೋದಾಗಿ ಮಾತನಾಡಿದರು.

Share This Article