‘ಬಿಗ್ ಬಾಸ್ ಕನ್ನಡ ಒಟಿಟಿ 1’ರ (Bigg Boss Kannada OTT 1) ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆಯಾಗುತ್ತಿರುವ ಹುಡುಗನ ಕುರಿತು ‘ಪಬ್ಲಿಕ್ ಟಿವಿ’ ಡಿಜಿಟಲ್‌ಗೆ ಸೋನು ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಮದುವೆಯಾಗುತ್ತಿರುವ ವಿಚಾರ ನಿಜ, ಮುಂದಿನ ವರ್ಷ ಮದುವೆ (Wedding) ಪ್ಲ್ಯಾನ್ ಮಾಡಿದ್ದೇವೆ ಎಂದು ಸೋನು ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ನಲ್ಲಿ ಸೊಂಟ ಬಳುಕಿಸಿದ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ


ಇನ್ನೂ ಸೋನು ಮದುವೆಯಾಗುತ್ತಿರುವ ವರ ಮೂಲತಃ ಬೆಂಗಳೂರಿನವರು. ಇದೀಗ ಅವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ನಮ್ಮೀಬ್ಬರ ಎಂಗೇಜ್‌ಮೆಂಟ್ ನಡೆಯಲಿದೆ. ಮುಂದಿನ ವರ್ಷ ನಮ್ಮ ಮದುವೆ ಎಂದು ಹೇಳಿದ್ದಾರೆ. ಆದರೆ ವರನ ಹೆಸರನ್ನು ಅವರು ರಿವೀಲ್ ಮಾಡಿಲ್ಲ. ಸದ್ಯದಲ್ಲೇ ಅಧಿಕೃತವಾಗಿ ತಿಳಿಸೋದಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ಸೆಟ್ಟೇರಿತು ರಾಘು ಶಿವಮೊಗ್ಗ ನಿರ್ದೇಶನದ ಹೊಸ ಸಿನಿಮಾ-‘ದಿ ಟಾಸ್ಕ್’ನಲ್ಲಿ ನವಪ್ರತಿಭೆಗಳ ಸಂಗಮ
ಇನ್ನೂ ಮದುವೆಯ ಬಗ್ಗೆ ಗುಡ್ ನ್ಯೂಸ್ ಕೊಟ್ಟಿರೋದರ ನಡುವೆ ಮನೆಯ ಗೃಹಪ್ರವೇಶದ ತಯಾರಿಯ ಬ್ಯುಸಿಯಲ್ಲಿದ್ದಾರೆ. ಇದೇ ನವೆಂಬರ್ 13ರಂದು ಮಂಡ್ಯದಲ್ಲಿ ಸೋನು ಅವರ ಹೊಸ ಮನೆಯ ಗೃಹಪ್ರವೇಶದ ಕಾರ್ಯಕ್ರಮ ಜರುಗಲಿದೆ. ಈ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು, ಕಿರುತೆರೆಯ ಕಲಾವಿದರು ಭಾಗಿಯಾಗಲಿದ್ದಾರೆ.



