‘ಬಿಗ್ ಬಾಸ್’ ಖ್ಯಾತಿಯ ಶೈನ್ ಶೆಟ್ಟಿ (Shine Shetty), ರಾಕೇಶ್ ಅಡಿಗ (Rakesh Adiga) ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಮಿಡ್ಲ್ ಕ್ಲಾಸ್ ಜನರ ಬದುಕಿನ ಕಥೆಗಳನ್ನು ಹೇಳೋಕೆ ರೆಡಿಯಾಗಿದ್ದಾರೆ. ‘ಮರ್ಯಾದೆ ಪ್ರಶ್ನೆ’ ಎನ್ನುತ್ತಿದ್ದಾರೆ ಬಿಗ್ ಬಾಸ್ ಸ್ಪರ್ಧಿಗಳು.
ದೈನಂದಿನ ಬದುಕಿನಲ್ಲಿ ನಡೆಯುವ ರಿಯಲ್ ಸ್ಟೋರಿಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ. ಎರಡು ಶೇಡ್‌ನಲ್ಲಿ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಮೂಡಿ ಬರಲಿದೆ. ಮಿಡಲ್ ಕ್ಲಾಸ್ ಕಥೆ, ಮತ್ತೊಂದು ಶ್ರೀಮಂತ ಹುಡುಗರ ಕಥೆ ತೋರಿಸಲಾಗುತ್ತದೆ. ಇದನ್ನೂ ಓದಿ:ನಟ ದರ್ಶನ್ ಬಳಿ ಇದೆ 2 ಯುಎಸ್ ಮೇಡ್ ಪಿಸ್ತೂಲ್‍ಗಳು!
ಈ ಚಿತ್ರವನ್ನು ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡುತ್ತಿದ್ದಾರೆ. ಆರ್ ಜೆ ಪ್ರದೀಪ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಅಂದಹಾಗೆ, ಈ ಚಿತ್ರದಲ್ಲಿ ರಾಕೇಶ್ ಅಡಿಗ, ಶೈನ್ ಶೆಟ್ಟಿ, ಸುನೀಲ್ ರಾವ್, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕರ್, ನಾಗೇಂದ್ರ ಶಾ ಸೇರಿದಂತೆ ಅನೇಕರು ನಟಿಸಿದ್ದಾರೆ.