‘ಬಿಗ್ ಬಾಸ್’ ಪ್ರಥಮ್ (Pratham) ಹಾಗೂ ದರ್ಶನ್ ಫ್ಯಾನ್ಸ್ ನಡುವಿನ ಕಿರಿಕ್ ಠಾಣೆ ಮೆಟ್ಟಿಲೇರಿದೆ. ದರ್ಶನ್ ಫ್ಯಾನ್ಸ್ (Darshan Fans) ನಿಂದಿಸಿದ ಆರೋಪದ ಮೇಲೆ ಬಸವೇಶ್ವರನಗರ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಥಮ್ ಇಂದು (ನ.16) ದೂರು ದಾಖಲಿಸಿದ್ದಾರೆ. ಇದನ್ನೂ ಓದಿ:ತಮಿಳು ನಿರ್ದೇಶಕ ಸುರೇಶ್ ಸಂಗಯ್ಯ ನಿಧನ
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪ್ರತಿಷ್ಠಿತ ಹೊಟೇಲ್‌ನಲ್ಲಿ ಊಟಕ್ಕೆ ಕುಳಿತಿದ್ದೇವು. ಅವರೇ ಬಂದು ಕಿರುಚಾಡಿ ಏನೆಲ್ಲಾ ಮಾಡಿದರು ಅನ್ನೋದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ನನ್ನ ಮೇಲೆ 2ನೇ ಸಲ ಹಲ್ಲೆಗೆ ಪ್ರಯತ್ನ ನಡೆದಿದೆ. ಮೊದಲ ಸಲ ಹಲ್ಲೆ ಆದಾಗಿನ ವಿಡಿಯೋ ಪೊಲೀಸರಿಗೆ ಕೊಟ್ಟಿದ್ದೇನೆ. ಕಳೆದ ಒಂದೂವರೆ ತಿಂಗಳ ಹಿಂದೆ ಕೂಡ ಹಲ್ಲೆ ಆಗಿತ್ತು. ಅದನ್ನೇ ಪೊಲೀಸ್ ಕೇಳಿದರು.
ನಾನು ಪ್ರಾಮಾಣಿಕವಾಗಿ ಹೇಳ್ತೀನಿ ದರ್ಶನ್ ಸರ್ ಮೇಲೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಆ ರೀತಿ ಆಗಿದ್ರೆ, ಮೊದಲ ಸಲನೇ ದೂರು ಕೊಡ್ತಿದ್ದೆ. ಮತ್ತೆ ಬೇಡ ಅಂತ ಸುಮ್ಮನಾಗಿದ್ದೆ, ಅವತ್ತೆ ದೂರು ಕೊಟ್ಟಿದ್ದರೆ ದೊಡ್ಡ ವಿಚಾರ ಆಗಿರೋದು. ಅವರ ಹೆಸರು ಹೇಳಬಹುದು ಆದರೆ ಹೇಳಿದರೆ ಅವರೆಲ್ಲಾ ಅಲರ್ಟ್ ಆಗುತ್ತಾರೆ. ಹಾಗಾಗಿ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ.
ಈ ವಿಚಾರದಲ್ಲಿ ನನ್ನ ಪ್ರಕಾರ 50ರಿಂದ 60 ಜನ ಒಳಗೆ ಹೋಗುತ್ತಾರೆ. ದರ್ಶನ್ ಸರ್ ಮೊದಲಿನ ರೀತಿಯಲ್ಲೇ ಸಿನಿಮಾ ಮಾಡಿಕೊಂಡು ಆರಾಮಾಗಿ ಇರೋದು ನನ್ನ ಆಸೆ. ಆದರೆ ಈ ಅಂಧಾಭಿಮಾನಿಗಳಿಗೆ ಅವರಿಗೆ ಮತ್ತಷ್ಟು ತೊಂದರೆಯಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರಥಮ್ ತಿಳಿಸಿದ್ದಾರೆ.