‘ಬಿಗ್ ಬಾಸ್’ (Bigg Boss Kannada 5) ಖ್ಯಾತಿಯ ನಿವೇದಿತಾ ಗೌಡ (Niveditha Gowda) ಶೋವೊಂದರಲ್ಲಿ ಜೀವನದಲ್ಲಿ ನಡೆದ ಸಂಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ನನ್ನ ಲೈಫ್‌ನಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿ ಆಗಿರೋಕೆ ನನ್ನ ತಂದೆಯೇ ಕಾರಣ ಎಂದು ನಿವೇದಿತಾ ಭಾವುಕರಾಗಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬ ಆಚರಿಸಿಕೊಳ್ಳಲು ವಿದೇಶಕ್ಕೆ ಹಾರಿದ ನ್ಯಾಷನಲ್ ಕ್ರಶ್ – ಈ ನಟನೊಂದಿಗೆ ರಶ್ಮಿಕಾ ಸೆಲೆಬ್ರೇಷನ್!
ಚಂದನ್ ಶೆಟ್ಟಿ ಜೊತೆಗಿನ ಡಿವೋರ್ಸ್ ಬಳಿಕ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲಿ ಸ್ಪರ್ಧಿಯಾಗಿ ನಿವೇದಿತಾ ಆ್ಯಕ್ಟೀವ್ ಆಗಿದ್ದಾರೆ. ಡಿವೋರ್ಸ್ ಆದ್ಮೇಲೆ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಟಿ ಮಾತನಾಡಿದ್ದಾರೆ. ಈ ಶೋನಲ್ಲಿ ನಿವೇದಿತಾ ಹಾಗೂ ಧನರಾಜ್ ಆಚಾರ್ ಇಬ್ಬರೂ ತಂದೆ-ಮಗಳ ಬಾಂಧವ್ಯದ ಕುರಿತ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆ ವೇಳೆ ನಿವೇದಿತಾ ಸಖತ್ ಎಮೋಷನಲ್ ಆಗಿ ಮಾತನಾಡಿದ್ದಾರೆ. ಇದನ್ನೂ ಓದಿ:L2: ಎಂಪುರಾನ್ ನಿರ್ದೇಶಕ ಪೃಥ್ವಿರಾಜ್‌ಗೆ ಐಟಿ ನೋಟಿಸ್ – ಸಂಭಾವನೆ ವಿವರ ನೀಡುವಂತೆ ಸೂಚನೆ
View this post on Instagram
ನನ್ನ ಲೈಫ್‌ನಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿ ಆಗಿರೋಕೆ ನನ್ನ ತಂದೆಯೇ ಕಾರಣ. ನಾನು ನಿನ್ನ ಜೊತೆಗೆ ಇದೀನಿ, ತಲೆ ಕೆಡಿಸಿಕೊಳ್ಳಬೇಡ ಅಂತ ಹೇಳುತ್ತಾರೆ. ಇದು ಅವರಿಗೆ ನಿಜಕ್ಕೂ ಕಷ್ಟ ಎಂದು ನಿವೇದಿತಾ ಅವರು ಹೇಳಿದ್ದಾರೆ. ನಿವೇದಿತಾ ಮಾತು ಕೇಳಿ ಐಶ್ವರ್ಯಾ, ಅನುಪಮಾ ಗೌಡ, ರಜತ್ ಕಣ್ಣೀರಿಟ್ಟಿದ್ದಾರೆ.
ಆಗ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ನೆನಪಿರಲಿ ಪ್ರೇಮ್ ಮಾತನಾಡಿ, ಪ್ರಪಂಚದಲ್ಲಿ ತಂದೆ ಅನ್ನೋ ಜೀವನೇ ಹಾಗೆ. ವಿಶೇಷವಾಗಿ ಹೆಣ್ಣು ಮಕ್ಕಳು ಏನಾದರೂ ಕೇಳಿದಾಗ ಜೀವ ಬಿಟ್ಟು, ಏನು ಬೇಕಿದ್ರೂ ತಂದುಕೊಡ್ತಾರೆ ಎಂದು ಹೇಳಿದ್ದಾರೆ.
ಡಿವೋರ್ಸ್‌ಗೂ ಮುನ್ನ ಒಪ್ಪಿಕೊಂಡಿದ್ದ ಚಂದನ್ ಶೆಟ್ಟಿ ಜೊತೆಗಿನ ‘ಮುದ್ದು ರಾಕ್ಷಸಿ’ (Muddu Rakshasi) ಸಿನಿಮಾವನ್ನು ಇತ್ತೀಚೆಗೆ ನಿವೇದಿತಾ ಗೌಡ ಮುಗಿಸಿಕೊಟ್ಟರು.