ರ‍್ಯಾಪರ್ ಚಂದನ್ ಶೆಟ್ಟಿ (Chandan Shetty) ಜೊತೆಗಿನ ಡಿವೋರ್ಸ್ (Divorce) ಬಳಿಕ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಮತ್ತಷ್ಟು ಹಾಟ್ ಆಗಿರುವ ನಿವೇದಿತಾ ಹೊಸ ರೀಲ್ಸ್‌ಗಳ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಶೇರ್ ಮಾಡಿರುವ ರೀಲ್ಸ್‌ನಲ್ಲಿ ನಟಿಯ ಅವತಾರ ನೋಡಿ ನೆಟ್ಟಿಗರು ಕಾಲೆಳೆದಿದ್ದಾರೆ.
ಬಿಗ್ ಬಾಸ್, ಗಿಚ್ಚಿ ಗಿಲಿಗಿಲಿ ಶೋ ನಂತರ ಹೊಸ ಹೊಸ ಫೋಟೋಶೂಟ್‌ಗಳಲ್ಲಿ ನಿವೇದಿತಾ (Niveditha Gowda) ಕಾಣಿಸಿಕೊಳ್ಳುತ್ತಿದ್ದಾರೆ. ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ನಟಿಗೆ ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್ ವ್ಯಕ್ತವಾಗಿದೆ. ಮೊದಲು ಬಾತ್‌ರೂಮ್‌ನಿಂದ ಆಚೆ ಬನ್ನಿ ಎಂದೆಲ್ಲಾ ನಟಿಗೆ ನೆಟ್ಟಿಗರು ಟೀಕಿಸಿದ್ದಾರೆ.
View this post on Instagram
ಅಂದಹಾಗೆ, ಚಂದನ್ ಶೆಟ್ಟಿ ಮುದ್ದುರಾಕ್ಷಸಿ, ಸೃಜನ್ ಲೋಕೇಶ್ ನಿರ್ದೇಶನದ ‘ಜಿಎಸ್‌ಟಿ’ ಚಿತ್ರದಲ್ಲಿಯೂ ನಿವೇದಿತಾ ನಟಿಸಿದ್ದಾರೆ. ಎರಡು ಸಿನಿಮಾಗಳ ರಿಲೀಸ್‌ಗೆ ನಟಿ ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಅಪಘಾತ: ಜೀವನ ಕ್ಷಣಿಕ ಎಂದ ‘ಪುಷ್ಪ’ ನಟಿ
ಇನ್ನೂ 2020ರ ಫೆ.26ರಂದು ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಮದುವೆಯಾದರು. ಈ ವರ್ಷ ಜೂನ್ 20ರಂದು ಡಿವೋರ್ಸ್ ಘೋಷಣೆ ಮಾಡಿದರು. ದಾಂಪತ್ಯ ಅಂತ್ಯವಾಗಿರುವ ಬಗ್ಗೆ ಚಂದನ್ ಮತ್ತು ನಿವೇದಿತಾ ಅಧಿಕೃತವಾಗಿ ತಿಳಿಸಿದರು.