ಚಂದನ್ ಶೆಟ್ಟಿ (Chandan Shetty) ಜೊತೆಗಿನ ಡಿವೋರ್ಸ್ (Divorce) ನಂತರ ನಿವೇದಿತಾ ಗೌಡ (Niveditha Gowda) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಟ್ರೋಲ್‌ಗೆ (Troll) ಡೋಂಟ್ ಕೇರ್ ಎನ್ನುತ್ತಾ ಮತ್ತೊಂದು ಬಾತ್‌ರೂಮ್ ರೀಲ್ಸ್ ಅನ್ನು ನಟಿ ಶೇರ್ ಮಾಡಿದ್ದಾರೆ.
ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ನಟಿ, ಮತ್ತಷ್ಟು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುವ ನಿವೇದಿತಾ ಈಗ ಕಿವಿ ಮೇಲೆ ಫ್ಲವರ್ ಇಟ್ಟುಕೊಂಡು ಬಾತ್‌ರೂಮ್‌ನಲ್ಲಿ ರೀಲ್ಸ್ ಮಾಡಿದ್ದಾರೆ. ಟ್ರೋಲ್ ಮಾಡುವವರಿಗೆ, ನೆಗೆಟಿವ್ ಕಾಮೆಂಟ್ ಮಾಡುವವರಿಗೆ ತಲೆಕೆಡಿಸಿಕೊಳ್ಳದೆ ಹೊಸ ರೀಲ್ಸ್‌ನಲ್ಲಿ ನಟಿ ಮಿಂಚಿದ್ದಾರೆ.
View this post on Instagram
ನಟಿಯ ರೀಲ್ಸ್ ನೋಡಿ ಮುಂದಿನ ನಿಮ್ಮ ಕರಿಮಣಿ ಮಾಲೀಕ ಯಾರು? ಎಂದೆಲ್ಲಾ ನೆಟ್ಟಿಗರು ಕಾಲೆಳೆದಿದ್ದಾರೆ. ಈ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ 6 ಮಿಲಿಯನ್‌ಗೂ ಅಧಿಕ ವಿವ್ಸ್ ಪಡೆದಿದೆ. ಇದನ್ನೂ ಓದಿ:ರಿಷಬ್ ಶೆಟ್ಟಿ ಫ್ಯಾಮಿಲಿ ಟೈಮ್- ಪತ್ನಿ ಜೊತೆ ಬೋಟಿಂಗ್ ಮಾಡಿದ ನಟ
ಅಂದಹಾಗೆ, ಚಂದನ್ ಶೆಟ್ಟಿ ಜೊತೆ ‘ಮುದ್ದು ರಾಕ್ಷಸಿ’ ಸಿನಿಮಾ, ಸೃಜನ್ ಲೋಕೇಶ್ ಜೊತೆ ‘ಜಿಎಸ್‌ಟಿ’ ಸಿನಿಮಾದಲ್ಲಿ ನಿವೇದಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.