‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಅವರು ಡಿವೋರ್ಸ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಬೋಲ್ಡ್ ಮತ್ತು ಆ್ಯಕ್ಟೀವ್ ಆಗಿದ್ದಾರೆ. ಇದೀಗ ಶಾರ್ಟ್ ಡ್ರೆಸ್ ಧರಿಸಿ ಸಿನಿಮಾ ಹಾಡೋದಕ್ಕೆ ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ. ಇದನ್ನೂ ಓದಿ:ಭಾವಿ ಪತಿ ಜೊತೆ ವೈಷ್ಣವಿ ರೊಮ್ಯಾಂಟಿಕ್ ಡಿನ್ನರ್ ಡೇಟ್- ಸೂಪರ್ ಜೋಡಿ ಎಂದ ಫ್ಯಾನ್ಸ್
ದಿನದಿಂದ ದಿನಕ್ಕೆ ನಿವೇದಿತಾ ಬೋಲ್ಡ್ ಅವತಾರ ತಾಳುತ್ತಿದ್ದಾರೆ. ಸದಾ ಒಂದಲ್ಲಾ ಒಂದು ರೀಲ್ಸ್ ಹಾಗೂ ಫೋಟೋಶೂಟ್ ಮೂಲಕ ಅವರು ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತಾರೆ. ಈಗ ಶಾರ್ಟ್ ಆಗಿರೋ ಬಟ್ಟೆ ಧರಿಸಿ ರೊಮ್ಯಾಂಟಿಕ್ ಹಾಡೋದಕ್ಕೆ ಹೆಜ್ಜೆ ಹಾಕಿದ್ದಾರೆ.
‘ಕೆಂಪೇಗೌಡ’ ಸಿನಿಮಾದ ‘ತರ ತರ ಹಿಡಿಸಿದೆ ಮನಸ್ಸಿಗೆ ನೀನು’ ಎಂಬ ಹಾಡು ಮಸ್ತ್ ಆಗಿ ಕುಣಿದಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಮತ್ತೆ ಲವ್ ಆಯ್ತಾ ಎಂದೆಲ್ಲಾ ನಟಿಗೆ ಕಾಲೆಳೆದಿದ್ದಾರೆ. ಇದನ್ನೂ ಓದಿ:18ನೇ ಆ್ಯನಿವರ್ಸರಿ ಸಂಭ್ರಮ: ಪತಿಯೊಂದಿಗಿನ ಫೋಟೋ ಹಂಚಿಕೊಂಡ ಐಶ್ವರ್ಯಾ ರೈ
View this post on Instagram
ಮಾಜಿ ಪತಿ ಚಂದನ್ ಶೆಟ್ಟಿ (Chandan Shetty) ಜೊತೆಗಿನ ‘ಮುದ್ದು ರಾಕ್ಷಸಿ’ (Muddu Rakshasi) ಸಿನಿಮಾವನ್ನು ನಿವೇದಿತಾ ಶೂಟಿಂಗ್ ಮುಗಿಸಿ ಕೊಟ್ಟಿದ್ದಾರೆ. ಸದ್ಯದಲ್ಲೇ ಚಿತ್ರತಂಡ ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ.