ಮಾಜಿ ಪತಿ ಚಂದನ್ ಶೆಟ್ಟಿ (Chandan Shetty) ಜೊತೆಗೆ ನಟಿಸಿರುವ ‘ಮುದ್ದು ರಾಕ್ಷಸಿ’ (Muddu Rakshasi) ಚಿತ್ರದ ಶೂಟಿಂಗ್ ಅನ್ನು ನಿವೇದಿತಾ ಗೌಡ (Niveditha Gowda) ಮುಗಿಸಿ ಕೊಟ್ಟಿದ್ದಾರೆ. ‘ಮುದ್ದು ರಾಕ್ಷಸಿ’ ಸಿನಿಮಾ ಕಂಪ್ಲೀಟ್ ಆಗಿರುವ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಯಶಸ್ವಿಯಾಗಿ ‘ಮುದ್ದು ರಾಕ್ಷಸಿ’ ಸಿನಿಮಾ ಚಿತ್ರೀಕರಣ ಮುಗಿಸಿದ್ದೇವೆ. ಈ ಚಿತ್ರತಂಡವನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ನಿವೇದಿತಾ ಗೌಡ ಇನ್ಸ್ಟಾಗ್ರಾಂ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಸಮಾಜ ಇರೋದೇ ಹೀಗೆ.. ಹೆಣ್ಣು ಮಕ್ಕಳನ್ನೇ ದೂಷಿಸ್ತಾರೆ – ಕೆಟ್ಟ ಟ್ರೋಲ್ ಬಗ್ಗೆ ನಿವಿ ಖಡಕ್ ಮಾತು
View this post on Instagram
‘ಮುದ್ದು ರಾಕ್ಷಸಿ’ ಎಂಬ ಸೈಕೋ ಥ್ರಿಲ್ಲರ್ ಕಥಾಹಂದರವಿರುವ ಈ ಸಿನಿಮಾದಲ್ಲಿ ಚಂದನ್ ಶೆಟ್ಟಿಗೆ ಪ್ರೇಮಿಯಾಗಿ ಲೀಡ್ ರೋಲ್‌ನಲ್ಲಿ ನಿವೇದಿತಾ ನಟಿಸಿದ್ದಾರೆ. ಇದನ್ನೂ ಓದಿ: ಲೈಫ್‌ಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿಯಾಗಿರೋಕೆ ತಂದೆಯೇ ಕಾರಣ- ನಿವೇದಿತಾ ಭಾವುಕ
ಸಿನಿಮಾಗೆ ಪುನೀತ್ ಶ್ರೀನಿವಾಸ್ ಅವರು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಶ್ರೀ ಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ನಿರ್ಮಿಸಿದ್ದಾರೆ. ಶೂಟಿಂಗ್ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಅಭಿಮಾನಿಗಳಿಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.
ಡಿವೋರ್ಸ್‌ಗೂ (Divorce) ಮುನ್ನ ಈ ಚಿತ್ರ ಸೆಟ್ಟೇರಿತ್ತು. ಆದರೆ ಕೆಲ ಭಾಗದ ಶೂಟಿಂಗ್ ಬಾಕಿ ಇದೆ ಎನ್ನುವಾಗ ಚಂದನ್ ಹಾಗೂ ನಿವೇದಿತಾ ತಮ್ಮ ವೈವಾಹಿಕ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟರು. ಆದರೆ ವೈಯಕ್ತಿಕ ಜೀವನದ ಏರಿಳಿತಗಳ ಪರಿಣಾಮ ತಮ್ಮ ವೃತ್ತಿಜೀವನದ ಮೇಲೆ ಬೀರದಂತೆ ನೋಡಿಕೊಂಡಿದ್ದಾರೆ. ಸಿನಿಮಾ ಮೇಲಿರುವ ಶ್ರದ್ಧೆಯಿಂದ ಬಾಕಿ ಉಳಿದಿದ್ದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಇತ್ತೀಚೆಗೆ ಇಬ್ಬರೂ ಚಿತ್ರೀಕರಣದಲ್ಲಿ ಭಾಗಿ ಆಗಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.