‘ಬಿಗ್ ಬಾಸ್’ ಖ್ಯಾತಿಯ ನಿಕ್ಕಿ ತಂಬೋಲಿ (Nikki Tamboli) ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಇದೀಗ ಪ್ರಿಯಕರ ಅರ್ಬಾಜ್ ಪಟೇಲ್ (Arbaz Patel) ಜೊತೆ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಬಾಯ್‌ಫ್ರೆಂಡ್ ಜೊತೆಗಿನ ನಟಿಯ ಲುಕ್ ನೋಡಿ ‘ಬೆಂಕಿ ಅವತಾರ’ ಎಂದು ಫ್ಯಾನ್ಸ್ ಕೊಂಡಾಡಿದ್ದಾರೆ. ಇದನ್ನೂ ಓದಿ:ಟಾಲಿವುಡ್‌ನತ್ತ ನಟ- ‘ಪುಷ್ಪ 2’ ನಿರ್ಮಿಸಿದ್ದ ಸಂಸ್ಥೆ ಜೊತೆ ಕೈಜೋಡಿಸಿದ ಉಪೇಂದ್ರ
ನಿಕ್ಕಿ ತಂಬೋಲಿ ಇಂಟರ್‌ನೆಟ್‌ನಲ್ಲಿ ಹೊಸ ಫೋಟೋಶೂಟ್ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಗೆಳೆಯ ಅರ್ಬಾಜ್ ಜೊತೆ ಹಾಟ್ & ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್ ನ್ಯೂಸ್- ಮತ್ತೆ ಕಿರುತೆರೆಗೆ ಬಂದ ಗೌತಮಿ
ಶೋಲ್ಡರ್ ಲೆಸ್ ಡ್ರೆಸ್‌ನಲ್ಲಿ ನಟಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ರೊಮ್ಯಾಂಟಿಕ್ ಆಗಿ ಇಬ್ಬರೂ ಪೋಸ್ ನೀಡುತ್ತಾ ವಿವಿಧ ಭಂಗಿಯಲ್ಲಿ ಫೋಟೋಶೂಟ್ ಮಾಡಿದ್ದಾರೆ.
ಪ್ರಿಯಕರ ಜೊತೆ ನಟಿಯ ಫೋಟೋಶೂಟ್ ನೋಡಿ ಕೆಲವರು ಮೆಚ್ಚುಗೆ ಸೂಚಿಸಿದ್ರೆ, ಇನ್ನೂ ಕೆಲವರು ಇಷ್ಟು ಬೋಲ್ಡ್ ಫೋಟೋಶೂಟ್ ಬೇಕಿತ್ತಾ ಎಂದು ನಿಕ್ಕಿಗೆ ಟೀಕಿಸಿದ್ದಾರೆ. ಒಟ್ನಲ್ಲಿ ನಿಕ್ಕಿ ಮಾತ್ರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ.
ಅರ್ಬಾಜ್ ಪಟೇಲ್ ಜೊತೆಗಿನ ಎಂಗೇಜ್ ಆಗಿರುವ ಕುರಿತು ನಟಿ ಈ ವರ್ಷ ಫೆಬ್ರವರಿಯಲ್ಲಿ ಅಧಿಕೃತವಾಗಿ ಹೇಳಿದ್ದರು. ಮದುವೆ ಬಗ್ಗೆ ಅದ್ಯಾವಾಗ ಗುಡ್ ನ್ಯೂಸ್ ಕೊಡ್ತಾರೆ ಎಂದು ಕಾದುನೋಡಬೇಕಿದೆ.
‘ಬಿಗ್ ಬಾಸ್’ ಹಿಂದಿ 14 ಮತ್ತು ಮರಾಠಿ ‘ಬಿಗ್ ಬಾಸ್ 5’ರಲ್ಲಿ ನಟಿ ನಿಕ್ಕಿ ತಂಬೋಲಿ ಸ್ಪರ್ಧಿಸಿದ್ದರು. ಕೆಲವು ಮ್ಯೂಸಿಕ್ ಆಲ್ಬಂ ಸಾಂಗ್‌ನಲ್ಲಿ ನಟಿಸಿದ್ದಾರೆ.