‘ಬಿಗ್ ಬಾಸ್’ ಖ್ಯಾತಿಯ ನೇಹಾ ಗೌಡ (Neha Ramakrishna) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರೆಗ್ನೆನ್ಸಿಯ ಕೊನೆಯ ತಿಂಗಳಿನ ಹಿನ್ನೆಲೆ ಬೇಬಿ ಬಂಪ್ ಫೋಟೋಶೂಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್‌ಗೆ ಬೆನ್ನು ನೋವು
View this post on Instagram
‘ಲಕ್ಷ್ಮಿ ಬಾರಮ್ಮ’ ನಟಿ ನೇಹಾ ಚೊಚ್ಚಲ ಮಗುವಿನ ಆಗಮನಕ್ಕೆ ಎದುರು ನೋಡುತ್ತಿದ್ದಾರೆ. ಇಡೀ ಕುಟುಂಬ ಈ ಸಂಭ್ರಮಕ್ಕಾಗಿ ಕಾಯುತ್ತಿದೆ. ಇದರ ನಡುವೆ ತುಂಬು ಗರ್ಭಿಣಿ ನೇಹಾ ಪತಿ ಜೊತೆ ಪೋಸ್ ಕೊಟ್ಟು ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡಿದ್ದಾರೆ.
View this post on Instagram
ನಟಿ ನೇರಳೆ ಬಣ್ಣದ ಸೀರೆಯಲ್ಲಿ ಮಿಂಚಿದ್ರೆ, ಚಂದನ್ ಗೌಡ ಬಿಳಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬೇಬಿ ಬಂಪ್ ತೋರಿಸಿ ನಟಿ ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಅಂದಹಾಗೆ, ಬಿಗ್ ಬಾಸ್, ಲಕ್ಷ್ಮಿ ಬಾರಮ್ಮ, ನಮ್ಮ ಲಚ್ಚಿ ಸೀರಿಯಲ್ ಜೊತೆ ತೆಲುಗಿನ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೇಹಾ ಪತಿ ಚಂದನ್ (Chandan Gowda) ಅವರು ‘ಅಂತರಪಟ’ (Antarapata) ಸೀರಿಯಲ್ ಹೀರೋ ಆಗಿ ನಟಿಸಿ ಸೈ ಎನಿಸಿಕೊಂಡಿದ್ದರು.