ಜಶ್ವಂತ್ ಜೊತೆಗಿನ ಬ್ರೇಕಪ್‌ಗೆ ಆ ವ್ಯಕ್ತಿ ಕಾರಣ: ‘ಬಿಗ್ ಬಾಸ್’ ಖ್ಯಾತಿಯ ನಂದು

Public TV
2 Min Read
jashwanth

ಬಿಗ್ ಬಾಸ್ ಒಟಿಟಿ 1ರ (Bigg Boss OTT 1) ಪ್ರೇಮ ಪಕ್ಷಿಗಳಾಗಿದ್ದ ಕೊಡಗಿನ ಕುವರ ಜಶ್ವಂತ್ ಬೋಪಣ್ಣ (Jashwanth Bopanna) ಮತ್ತು ನಂದಿನಿ (Nandini) ದೊಡ್ಮನೆ ಆಟ ಮುಗಿದ ಮೇಲೆ ಬ್ರೇಕಪ್ ಮಾಡಿಕೊಂಡರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಬ್ರೇಕಪ್ ಮಾಡಿಕೊಂಡಿರುವುದಾಗಿ ನಟಿ ತಿಳಿಸಿದ್ದರು. ಆದರೆ ಕಾರಣ ಏನು ಎಂಬುದು ರಿವೀಲ್ ಆಗಿರಲಿಲ್ಲ. ಈಗ ಆ ವ್ಯಕ್ತಿಯಿಂದ ಬ್ರೇಕ್ ಆಯ್ತು ಎಂದು ನಟಿ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ:ಜೈಲಿಗೆ ದರ್ಶನ್ ನೋಡಲು ಮಗನ ಜೊತೆ ಬಂದ ವಿಜಯಲಕ್ಷ್ಮಿ

jashwanth

ಪ್ರೇಮಿಗಳಾಗಿದ್ದ ನಂದು ಮತ್ತು ಜಶ್ವಂತ್ ‘ರೋಡೀಸ್ 18’ ಶೋನಲ್ಲಿ ಭಾಗವಿಹಿಸಿದ್ದರು. ಈ ಶೋನಲ್ಲಿ ನಂದು ವಿನ್ನರ್ ಆಗಿದ್ರೆ, ಜಶ್ವಂತ್ ಮೊದಲ ರನ್ನರ್ ಅಪ್ ಆಗಿದ್ರು. ನಂತರ ಕನ್ನಡದ ಒಟಿಟಿ ಬಿಗ್ ಬಾಸ್‌ಗೆ ಜೊತೆಯಾಗಿ ಬಂದರು. ಅದೆನಾಯ್ತೋ ಏನೋ ಶೋ ಮುಗಿದ ಮೇಲೆ ರಿಲೇಷನ್‌ಶಿಪ್‌ಗೆ ಇಬ್ಬರೂ ಫುಲ್ ಸ್ಟಾಪ್ ಇಟ್ಟಿದ್ದರು. ಈಗ ಬ್ರೇಕಪ್ ಕುರಿತು ನಟಿ ರಿಯಾಕ್ಟ್ ಮಾಡಿದ್ದಾರೆ.

BIGG BOSS NANDINI JASHWANTH 1

ನಾವಿಬ್ಬರೂ ಬಿಗ್ ಬಾಸ್ ಕನ್ನಡ ಓಟಿಟಿ 1 ಶೋನಲ್ಲಿ ಭಾಗವಹಿಸಿದ್ವಿ. ಅದರಲ್ಲಿ ಜಶ್ವಂತ್ ಇನ್ನೋರ್ವ ಹುಡುಗಿಯ ಜೊತೆ ಕ್ಲೋಸ್ ಆಗಿದ್ದ. ನನಗೆ ಅದನ್ನು ನೋಡಲು ಆಗಲಿಲ್ಲ. ನಿಮ್ಮ ಹುಡುಗ ಬೇರೆ ಹುಡುಗಿಯ ಜೊತೆ ಇರೋದನ್ನ ಹೇಗೆ ಸಹಿಸಿಕೊಳ್ಳುತ್ತೀರಾ ಅಲ್ವಾ ಶೋನಲ್ಲೇ ಇದು ನನಗೆ ಬಹಳ ಕಷ್ಟವಾಯಿತು. ಆ ಎಮೋಷನ್‌ಗಳು ನನ್ನೋಳಗೆ ಇತ್ತು. ಹೊರಗೆ ಬರಲಿಲ್ಲ ಎಂದಿದ್ದಾರೆ ನಂದಿನಿ. ಇದನ್ನೂ ಓದಿ:ನ್ಯಾಚುರಲ್ ಸ್ಟಾರ್ ನಾನಿಗೆ ಕನ್ನಡತಿ ಪ್ರಿಯಾಂಕಾ ಮೋಹನ್ ಜೋಡಿ

jashwanth nandiniಬಿಗ್ ಬಾಸ್‌ನಲ್ಲಿ ಅವನು ನನ್ನನ್ನ ಇಗ್ನೋರ್ ಮಾಡ್ತಾ ಇದ್ದದ್ದು, ಗೌರವ ಕೊಡದೇ ಇದ್ದಿದ್ದು ನನಗೆ ಹರ್ಟ್ ಆಯಿತು. ಗೌರವ ಇಲ್ಲ ಅಂದ್ಮೇಲೆ ಕಂಟಿನ್ಯೂ ಮಾಡಬಾರದು ಎನಿಸಿತು. ಹೀಗಾಗಿ ಗೌರವದಿಂದಲೇ ನಾವು ಬ್ರೇಕಪ್ ಮಾಡಿಕೊಳ್ಳೋಣ ಎಂದೆ ಎಂದು ‘ಸ್ಪ್ಲಿಟ್ಸ್ವಿಲ್ಲಾ 15’ ಶೋ ರಿಯಾಕ್ಷನ್ ವಿಡಿಯೋದಲ್ಲಿ ನಂದಿನಿ ಹೇಳಿದ್ದಾರೆ. ಆದರೆ  ಜಶ್ವಂತ್‌ ಜೊತೆ ಕ್ಲೋಸ್‌ ಇದ್ದ ಆ ಮಹಿಳಾ ಸ್ಪರ್ಧಿ ಯಾರು? ಯಾವ ಹುಡುಗಿಯಿಂದ ಬ್ರೇಕಪ್ ಆಯಿತು ಎಂದು ನಂದಿನಿ ರಿವೀಲ್ ಮಾಡಿಲ್ಲ. ಕಾರಣ ಮಾತ್ರ ವಿವರಿಸಿದ್ದಾರೆ.

‘ಸ್ಪ್ಲಿಟ್ಸ್ವಿಲ್ಲಾ 15’ ಶೋನಲ್ಲಿ ಸದ್ಯ ಆಕ್ರಿತಿ ನೇಗಿ ಜೊತೆ ಜಶ್ವಂತ್‌ ಕ್ಲೋಸ್‌ ಆಗಿದ್ದಾರೆ. ಈ ಶೋಗಷ್ಟೇನಾ? ಅಥವಾ ಕಾರ್ಯಕ್ರಮ ಮುಗಿದ ಮೇಲೆ ಮುಂದುವರೆಯುತ್ತಾ? ಕಾದುನೋಡಬೇಕಿದೆ.

Share This Article