‘ಬಿಗ್ ಬಾಸ್’ (Bigg Boss Hindi) ಖ್ಯಾತಿಯ ಹಿನಾ ಖಾನ್ (Hina Khan) ಸ್ತನ ಕ್ಯಾನ್ಸರ್‌ನಿಂದ (Breast Cancer) ಬಳಲುತ್ತಿದ್ದು, ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಇದೀಗ ಟ್ರಿಮ್ಮರ್ ಹಿಡಿದು ನಟಿ ತಲೆಬೋಳಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಹಿನಾ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಟಿಯ ನಡೆ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಇದನ್ನೂ ಓದಿ:ಕಾಪಿರೈಟ್ ಉಲ್ಲಂಘನೆ ಕೇಸ್- ಕೋರ್ಟ್‌ನಲ್ಲಿ ಹೋರಾಟ ಮಾಡ್ತೀನಿ ಎಂದ ರಕ್ಷಿತ್ ಶೆಟ್ಟಿ
ತಲೆಬೋಳಿಸುವ ಮುನ್ನ ನಟಿ ಮಾತನಾಡಿ, ಅನಾರೋಗ್ಯವನ್ನು ಎದುರಿಸಬೇಕು ಎಂದರೆ ಮಾನಸಿಕವಾಗಿ ಗಟ್ಟಿಯಾಗಿ ನಿಲ್ಲಬೇಕು. ಹೀಗೆ ಮಾಡಿದಾಗ ಚಿಕಿತ್ಸೆಗೆ ಇನ್ನೊಂದು ಹೆಜ್ಜೆ ಹತ್ತಿರ ಬರುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಮಾತನಾಡಿದ್ದಾರೆ. ನಟಿಯ ವಿಡಿಯೋದಲ್ಲಿನ ಮಾತುಗಳನ್ನು ಕೇಳಿ ಫ್ಯಾನ್ಸ್, ನೀವು ಆದಷ್ಟು ಬೇಗ ಗುಣಮುಖರಾಗಬೇಕು ಎಂದು ಹಾರೈಸಿದ್ದಾರೆ.
View this post on Instagram
ಕ್ಯಾನ್ಸ್‌ರ್ ಚಿಕಿತ್ಸೆ ಪಡೆಯುವಾಗ ಪ್ರತಿ ದಿನ ಕೂದಲು ಉದುರಲು ಆರಂಭವಾಗುತ್ತದೆ. ಇದೆಲ್ಲಾ ಕಿರಿ ಕಿರಿ ಆಗೋದು ಸಹಜ. ಅದರಲ್ಲೂ ಮಹಿಳೆಯರಿಗೆ ಹೆಚ್ಚು ಕೂದಲು ಉದುರಿದರೆ ಹೆಚ್ಚು ಬೇಸರ ಆಗುತ್ತದೆ. ಹಾಗಾಗಿ ಮಾನಸಿಕ ಆರೋಗ್ಯಕ್ಕಾಗಿ ಈ ನಿರ್ಧಾರವನ್ನು ನಟಿ ಕೈಗೊಂಡಿದ್ದಾರೆ.
ಕಳೆದ 16 ವರ್ಷಗಳಿಂದ ಕಿರುತೆರೆಯಲ್ಲಿ ನಟಿ ಆಕ್ಟಿವ್ ಆಗಿದ್ದಾರೆ. ಸಿನಿಮಾ, ಸಾಲು ಸಾಲು ಸೀರಿಯಲ್‌ಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಹಿನಾಗೆ ಭಾರೀ ಜನಪ್ರಿಯತೆ ನೀಡಿತ್ತು.