‘ಬಿಗ್ ಬಾಸ್ ಕನ್ನಡ 8’ರ ಸ್ಪರ್ಧಿಯಾಗಿದ್ದ ದಿವ್ಯಾ ಉರುಡುಗ (Divya Uruduga) ಮತ್ತು ಅರವಿಂದ್ ಕೆ.ಪಿ (Aravind) ಜೋಡಿ ಅದ್ಯಾವಾಗ ಮದುವೆ ಕುರಿತು ಗುಡ್ ನ್ಯೂಸ್ ಕೊಡುತ್ತಾರೆ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಇದೀಗ ದಿವ್ಯಾ ಶೇರ್ ಮಾಡಿದ ಹೊಸ ಪೋಸ್ಟ್ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಿಶನ್ ಬಿಳಗಲಿ ಜೊತೆ ದಿವ್ಯಾ ಹಸೆಮಣೆ ಮೇಲೆ ಕುಳಿತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಅರ್ವಿಯಾ ಅಭಿಮಾನಿಗಳು ಅರವಿಂದ್ ಕೆ ಪಿ ಜೊತೆ ದಿವ್ಯಾ ಮದುವೆ ಆಗಬೋದು ಎನ್ನೋ ಲೆಕ್ಕಾಚಾರದಲ್ಲಿದ್ದರೆ, ಇಲ್ಲಿ ದಿಢೀರ್ ಅಂತ ಮದುವೆ ಹೆಣ್ಣಿನ ಗೆಟಪ್‌ನಲ್ಲಿ ಕಾಣಿಸಿಕೊಂಡು ದಿವ್ಯಾ ಅಚ್ಚರಿ ಮೂಡಿಸಿದ್ದಾರೆ. ಹಾಗಂತ, ಕಿಶನ್ ಮತ್ತು ದಿವ್ಯಾ ಮದುವೆ ಆಗುತ್ತಿಲ್ಲ. ಇದೆಲ್ಲವೂ ಬರೀ ಧಾರಾವಾಹಿಗಾಗಿ ಮಾತ್ರ. ಇದನ್ನೂ ಓದಿ:ಅಜ್ಜಿಯ ನೆನೆದು ಭಾವನಾತ್ಮಕ ಪತ್ರ ಬರೆದ ಸುದೀಪ್ ಪುತ್ರಿ
View this post on Instagram
‘ನಿನಗಾಗಿ’ ಧಾರಾವಾಹಿಯಲ್ಲಿ ದಿವ್ಯಾ ಮತ್ತು ಕಿಶನ್ ಬಣ್ಣ ಹಚ್ಚಿದ್ದಾರೆ. ಸೀರಿಯಲ್‌ನ ಮದುವೆ ದೃಶ್ಯ ಇದಾಗಿದ್ದು, ದಿವ್ಯಾ ಮತ್ತು ಕಿಶನ್ ಮದುವೆ ಗೆಟಪ್‌ನಲ್ಲಿದ್ದಾರೆ.
ಅಂದಹಾಗೆ, ‘ಬಿಗ್ ಬಾಸ್ ಕನ್ನಡ 8’ರಲ್ಲಿ ಪರಿಚಿತರಾದ ದಿವ್ಯಾ ಮತ್ತು ಅರವಿಂದ್ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಜೊತೆಗಾಗಿ ಒಂದು ಸಿನಿಮಾ ಕೂಡ ಮಾಡಿದ್ದಾರೆ. ಇನ್ನೂ ಮುಂದಿನ ವರ್ಷ ಇಬ್ಬರೂ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನಿಜನಾ? ಈ ಜೋಡಿ ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.