ನಾಗಿಣಿ, ಬಿಗ್ ಬಾಸ್ ಖ್ಯಾತಿಯ (Bigg Boss Kannada 7) ದೀಪಿಕಾ ದಾಸ್ (Deepika Das) ಮತ್ತೆ ಸಿನಿಮಾಗೆ ಮರಳಿದ್ದಾರೆ. ಮದುವೆ ಬಳಿಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ‘ಪಾರು ಪಾರ್ವತಿ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ನಟಿ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ತರುಣ್ ಸುಧೀರ್, ಸೋನಲ್ ಚರ್ಚ್ ವೆಡ್ಡಿಂಗ್ ಆಲ್ಬಂ
ಬಹಳ ದಿನಗಳ ನಂತರ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ರೆಡಿ ಆಗಿದ್ದಾರೆ. ‘ಪಾರು ಪಾರ್ವತಿ’ (Paru Parvathy Film) ಎಂಬ ಸಿನಿಮಾದಲ್ಲಿ ದೀಪಿಕಾ ದಾಸ್ ನಾಯಕಿಯಾಗಿದ್ದಾರೆ. ಅಡ್ವೆಂಚರಸ್ ಕುರಿತಾದ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.
View this post on Instagram
‘ಪಾರು ಪಾರ್ವತಿ’ ಸಿನಿಮಾದಲ್ಲಿ ಪಾಯಲ್ ಅನ್ನೋ ಪಾತ್ರದಲ್ಲಿ ದೀಪಿಕಾ ನಟಿಸಿದ್ದಾರೆ. ಈ ಪಾತ್ರಕ್ಕಾಗಿ ತೂಕವನ್ನು ಕೂಡ ಕಡಿಮೆ ಮಾಡಿಕೊಂಡಿದ್ದಾರೆ. ಜೊತೆಗೆ ಕೂದಲಿಗೂ ಕತ್ತರಿ ಹಾಕಿದ್ದಾರೆ. ಅಂದಹಾಗೆ, ದೀಪಿಕಾ ಅವರು ರಿಯಲ್ ಲೈಫ್‌ನಲ್ಲಿ ಜಾಸ್ತಿ ಪ್ರವಾಸ ಮಾಡುತ್ತಾರೆ. ಈ ಸಿನಿಮಾದಲ್ಲೂ ಅವರಿಗೆ ಟ್ರಾವೆಲ್ ಮಾಡುವ ಹುಡುಗಿಯ ಪಾತ್ರವೇ ಸಿಕ್ಕಿದೆ.
View this post on Instagram
ಇನ್ನೂ 198 ದೇಶಗಳನ್ನು ಸುತ್ತಬೇಕು ಎಂಬುದು ನನ್ನ ಜೀವನದ ಮಹಾದಾಸೆ. ಈ ಸಿನಿಮಾದಲ್ಲಿ ನಾನು ಮಾಡಿರುವ ಪಾತ್ರಕ್ಕೂ ನನ್ನ ನಿಜ ಜೀವನದ ಪಾತ್ರಕ್ಕೂ ಸಾಕಷ್ಟು ಸಾಮ್ಯತೆ ಇದೆ. ನಮ್ಮ ನಿರ್ದೇಶಕರು ಅನೇಕ ಬಾರಿ ಅದನ್ನು ಹೇಳಿದ್ದಾರೆ. ನಿಮ್ಮಂತೆಯೇ ಈ ಸಿನಿಮಾದ ಪಾಯಲ್ ಪಾತ್ರ ಕೂಡ ಇದೆ ಎನ್ನುತ್ತಿರುತ್ತಾರೆ. ಸದ್ಯಕ್ಕೆ ಹೊಸ ಸಿನಿಮಾಗಳ ಸ್ಕ್ರಿಪ್ಟ್ ಕೇಳುತ್ತಿದ್ದೇನೆ ಎಂದು ದೀಪಿಕಾ ದಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಸದ್ಯ ‘ಪಾರು ಪಾರ್ವತಿ’ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ಈ ವರ್ಷದ ಅಂತ್ಯದೊಳಗೆ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ.