ಕಿರುತೆರೆ ನಟಿ ದೀಪಿಕಾ ದಾಸ್ (Deepika Das) ತಾಯಿಗೆ ವ್ಯಕ್ತಿಯೋರ್ವನಿಂದ ಬೆದರಿಕೆ ಕರೆ ಬಂದಿದೆ. ಮಗಳು ಮತ್ತು ಅಳಿಯನ ಬಗ್ಗೆ ಅಪಪ್ರಚಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯ ಮೇಲೆ ದೀಪಿಕಾ ದಾಸ್ ತಾಯಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:BBK 11: ನಿನ್ನದು ನರಿ ಕಣ್ಣೀರು- ಯುವರಾಣಿ ಮೋಕ್ಷಿತಾಗೆ ತಿವಿದ ಉಗ್ರಂ ಮಂಜು
ದೀಪಿಕಾ ದಾಸ್ ಮದುವೆಯ ಬಳಿಕ ಪತಿ ಜೊತೆ ವಿದೇಶಕ್ಕೆ ತೆರಳಿದ್ದಾರೆ. ಈ ವೇಳೆ, ಯಶವಂತ ಎಂಬವನು ದೀಪಿಕಾ ತಾಯಿಗೆ ಕರೆ ಮಾಡಿ, ಯಾಕೆ ನಿಮ್ಮ ಮಗಳಿಗೆ ಮದುವೆ ಮಾಡಿದ್ದೀರಿ? ಆತ ಒಬ್ಬ ಮೋಸಗಾರ ರಿಯಲ್ ಎಸ್ಟೇಟ್ ಹೆಸರಲ್ಲಿ ಜನರಿಗೆ ಮೋಸ ಮಾಡಿದ್ದಾನೆ ಎಂದು ಹೇಳಿದ್ದನಂತೆ. ನನ್ನ ಅಳಿಯ ಹಾಗೆ ಮಾಡಿದ್ದರೆ ನೀವು ಕಾನೂನು ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ರಂತೆ.
ಅಷ್ಟಕ್ಕೂ ಸುಮ್ಮನಾಗದ ಯಶವಂತ ದೀಪಿಕಾಗೂ ಕರೆ ಮಾಡಿ, ನಿಮ್ಮ ಗಂಡ ಹಲವರಿಗೆ ಮೋಸ ಮಾಡಿದ್ದಾನೆಂದು ಹೇಳಿದ್ದಾನೆ. ಇದಕ್ಕೆ ದೀಪಕಾ, ನನ್ನ ಗಂಡ ಯಾರಿಗೂ ವಂಚನೆ ಮಾಡಿಲ್ಲ ಮಾಡಿದ್ದರೆ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲು ಹೇಳಿದ್ದಾರೆ ಎಂದಿದ್ದಾರೆ. ಇದರಿಂದ ಕೋಪಕೊಂಡ ಯಶವಂತ ನಿಮ್ಮ ಹೆಸರಿಗೆ ಕಳಂಕ ತರುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೇ ಅಪಪ್ರಚಾರ ಮಾಡದೇ ಇರೋದಕ್ಕೆ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಹಿನ್ನೆಲೆ ದೀಪಿಕಾ ದಾಸ್ ತಾಯಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.