ನಟಿ ದೀಪಿಕಾ ದಾಸ್ (Deepika Das) ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಇದೀಗ ರೀಲ್ಸ್ ಮಾಡುವಾಗ ಫಾಲ್ಸ್‌ನಲ್ಲಿ ನಟಿ ಮುಗ್ಗರಿಸಿ ಬಿದ್ದಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಖತ್ ವೈರಲ್ ಆಗಿದೆ. ಈ ಬೆನ್ನಲ್ಲೇ, ನನಗೇನು ಆಗಿಲ್ಲ ಭಯ ಬೇಡ ಅಂತ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸಿನಿ ನಿರ್ದೇಶಕ ಗಜೇಂದ್ರ ಕೊಲೆ ಕೇಸ್‌ನಲ್ಲಿ ಅರೆಸ್ಟ್!
ದೀಪಿಕಾ ದಾಸ್‌ಗೆ ಟ್ರಾವೆಲ್ ಮಾಡೋದು ತುಂಬಾ ಇಷ್ಟ ಸದಾ ಒಂದಲ್ಲಾ ಒಂದು ವಿದೇಶದ ಪ್ರವಾಸ ಮಾಡುತ್ತಾ ಇರುತ್ತಾರೆ. ಇತ್ತೀಚೆಗೆ ಪ್ರವಾಸ ಹೋಗಿದ್ದ ವೇಳೆ, ರೀಲ್ಸ್ ಮಾಡುತ್ತಿದ್ದಾಗ ನಟಿ ಮುಗ್ಗರಿಸಿ ಬಿದ್ದಿದ್ದಾರೆ. ಈ ವಿಡಿಯೋ ಸ್ವತಃ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ ಆತಂಕಕ್ಕೆ ಒಳಗಾಗಿದ್ದ ಫ್ಯಾನ್ಸ್‌ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.
View this post on Instagram
ಫಾಲ್ಸ್‌ನಲ್ಲಿ ಆಕಸ್ಮಿಕವಾಗಿ ಬಿದ್ದಿರೋದು ನಿಜ. ಆದರೆ ಈ ವಿಡಿಯೋ 3 ತಿಂಗಳು ಹಿಂದಿನದ್ದು ಆಗಿದೆ. ಈಗಿನ ಟ್ರೆಂಡ್ ಚೆಕ್ ಮಾಡಲು ಹಳೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದೆ. ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದಾಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದೇನೆ. ಆದರೆ ಈಗ ಚೆನ್ನಾಗಿದ್ದೇನೆ. ಆತಂಕ ಬೇಡ. ಇಷ್ಟೊಂದು ಪ್ರೀತಿ ತೋರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಎಂದು ದೀಪಿಕಾ ದಾಸ್ ತಿಳಿಸಿದ್ದಾರೆ.
ಅಂದಹಾಗೆ, ನಾಗಿಣಿ ಸೀರಿಯಲ್, ಬಿಗ್ ಬಾಸ್ ಕನ್ನಡ 7 (Bigg Boss Kannada 7) ಶೋನಿಂದ ದೀಪಿಕಾ ಮನೆ ಮಾತಾಗಿದ್ದಾರೆ. ಸದ್ಯ ‘ಚೌಕಟ್ಟು’ ಎಂಬ ಸಿನಿಮಾ ಮೂಲಕ ಮತ್ತೆ ಬೆಳ್ಳಿಪರದೆಯಲ್ಲಿ ಸದ್ದು ಮಾಡಲು ರೆಡಿಯಾಗಿದ್ದಾರೆ.