ಕೃಷ್ಣ ರುಕ್ಮಿಣಿ, ನಾಗಿಣಿ, ಬಿಗ್ ಬಾಸ್ ಶೋಗಳ ಮೂಲಕ ಟಿವಿ ಪರದೆಯಲ್ಲಿ ಮಿಂಚಿದವರು ದೀಪಿಕಾ ದಾಸ್. ಇದೀಗ ತಮ್ಮ ಅಭಿಮಾನಿಗಳು ಸಂಭ್ರಮಿಸುವಂತಹ ಸುದ್ದಿ ನೀಡಿದ್ದಾರೆ. ದೀಪಿಕಾ ದಾಸ್ (Deepika Das) ಮತ್ತೆ ಕಿರುತೆರೆಗೆ (Tv) ಕಮ್‌ಬ್ಯಾಕ್ ಆಗಿದ್ದಾರೆ.
‘ನಾಗಿಣಿ’ (Nagini) ಧಾರಾವಾಹಿ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ನಟಿ ದೀಪಿಕಾ ದಾಸ್, ಬಳಿಕ ದೊಡ್ಮನೆ ಅಂಗಳಕ್ಕೆ ಕಾಲಿಟ್ಟರು ಫೈನಲಿಸ್ಟ್ ಆಗಿ ಗಟ್ಟಿ ಫೈಟ್ ನೀಡಿದ್ದರು. ಶೈನ್ ಶೆಟ್ಟಿ -ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ (Bigg Boss Kannada) ಟ್ರೋಫಿ ಗೆದ್ದ 2 ಸೀಸನ್‌ನಲ್ಲಿ ದೀಪಿಕಾ ದಾಸ್ ಕೊನೆಯ ಹಂತದವರೆಗೂ ಇದ್ದು ಬಿಗ್ ಫೈಟ್ ನೀಡಿದ್ದರು. ಇದನ್ನೂ ಓದಿ:ಟಾಪ್‌ಲೆಸ್ ಆಗಿ ಪೋಸ್ ನೀಡಿದ ಕನ್ನಡದ ʻಹೆಡ್‌ಬುಷ್ʼ ನಟಿ ಪಾಯಲ್
View this post on Instagram
ಇದೀಗ ‘ಬಿಗ್ ಬಾಸ್’ ಸೀಸನ್ 9 ಶೋ ಮುಗಿದ ಮೇಲೆ ಫೀಮೇಲ್ ಓರಿಯೆಂಟೆಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬೆನ್ನಲ್ಲೇ ಟಿವಿ ಪ್ರೇಕ್ಷಕರಿಗೆ ದೀಪಿಕಾ ಗುಡ್ ನ್ಯೂಸ್ ನೀಡಿದ್ದಾರೆ. ‘ಅಂತರಪಟ’ ಸೀರಿಯಲ್‌ನಲ್ಲಿ ದೀಪಿಕಾ ದಾಸ್ ಅವರು ಸಮೀರಾ ಎಂಬ ಪಾತ್ರದ ಮೂಲಕ ಕಾಣಿಸಿಕೊಳ್ತಿದ್ದಾರೆ. ಸಂಸ್ಥೆಯೊಂದರ ಸಿಇಓ ಆಗಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ದೀಪಿಕಾ ದಾಸ್ ‘ಅಂತರಪಟ’ ಸೀರಿಯಲ್‌ಗೆ ಸಾಥ್ ನೀಡಿದ್ದಾರೆ. ಅತಿಥಿ ಪಾತ್ರದಲ್ಲಿ ನಟಿ ಅಭಿನಯಿಸಿದ್ದಾರೆ.
ಇನ್ನೂ ನಟಿ ದೀಪಿಕಾ ದಾಸ್‌ಗೆ ಶೂಟಿಂಗ್‌ಗೆ ಬ್ರೇಕ್ ಇದ್ದಾಗ, ಟ್ರಾವೆಲಿಂಗ್ ಮಾಡೋದು ಅಂದರೆ ತುಂಬಾ ಇಷ್ಟ. ಸೋಲೋ ಟ್ರಾವೆಲ್ ಕೂಡ ಅಷ್ಟೇ ಇಷ್ಟಪಡುತ್ತಾರೆ.