ಸ್ವಂತ ಮನೆಗೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಅನುಪಮಾ ಗೌಡ

Public TV
1 Min Read
FotoJet 12

‘ಬಿಗ್ ಬಾಸ್’ (Bigg Boss) ಖ್ಯಾತಿಯ ಅನುಪಮಾ ಗೌಡ (Anupama Gowda) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಾಜಾ ರಾಣಿ, ಗಿಚ್ಚಿ ಗಿಲಿಗಿಲಿ, ಅನುಬಂಧ ಅವಾರ್ಡ್ಸ್, ನನ್ನಮ್ಮ ಸೂಪರ್ ಸ್ಟಾರ್ ಮುಂತಾದ ಕಾರ್ಯಕ್ರಮಗಳ ನಿರೂಪಕಿಯಾಗಿದ್ದ ಅನುಪಮಾ ಗೌಡ ಇದೀಗ ಹೊಸ ಮನೆಗೆ ಕಾಲಿಟ್ಟ ಸಂಭ್ರಮದಲ್ಲಿದ್ದಾರೆ.

anupama gowdaಅನುಪಮಾ ಗೌಡ ಹೊಸ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದಾರೆ. ಅನುಪಮಾ ಗೌಡ ಅವರ ನೂತನ ನಿವಾಸದ ಗೃಹಪ್ರವೇಶ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಹಲವು ವರ್ಷಗಳ ಅವರ ಕನಸು ನನಸಾಗಿದೆ. ಇದನ್ನೂ ಓದಿ:ಮಿಸ್ ಯು ಹೆಂಡ್ತಿ.. ಈ ಮೆಸೇಜ್ ದರ್ಶನ್ ಕಳಿಸಿದ್ದಾ or ಹೇಮಂತ್ ಮಾಡಿದ್ದಾ: ಎಸ್‌ಪಿಪಿ ಪ್ರಶ್ನೆ

ಅನುಪಮಾ ಅವರ ಹೊಸ ಮನೆಯ ಗೃಹಪ್ರವೇಶಕ್ಕೆ ಕಿರುತೆರೆ ನಟ-ನಟಿಯರು ಹಾಜರಿದ್ದರು. ಅಂದ್ಹಾಗೆ, ತಮ್ಮ ಮನೆಗೆ ‘ನಮ್ಮನೆ’ ಅಂತ ಅನುಪಮಾ ಗೌಡ ಹೆಸರಿಟ್ಟಿದ್ದಾರೆ. ‘ನಮ್ಮನೆ’ಯ ಹೌಸ್ ವಾರ್ಮಿಂಗ್ ಸೆರಮನಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

ನಟಿಯ ಮನೆಯ ಕಾರ್ಯಕ್ರಮದಲ್ಲಿ ನಟಿ ಅನುಪ್ರಭಾಕರ್, ನೇಹಾ ಗೌಡ, ನಮ್ರತಾ ಗೌಡ, ಕಿಶನ್ ಬಿಳಗಲಿ, ಕಾರ್ತಿಕ್ ಮಹೇಶ್, ದಿವ್ಯಾ ಉರುಡುಗ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ.

ಅಂದಹಾಗೆ, ಅವರು ಕೆಲ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬೆಂಕಿಯಲ್ಲಿ ಅರಳಿದ ಹೂವು, ತ್ರಯಂಬಕಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಕಿರುತೆರೆ ನಟನೆ ಮತ್ತು ನಿರೂಪಣೆ ಕೈಹಿಡಿದಿದೆ.

Share This Article