ದೊಡ್ಮನೆಯಲ್ಲಿ ಮನೆಮಂದಿಗೆ ಬಿಗ್ ಬಾಸ್ (Bigg Boss) ಅಚ್ಚರಿ ನೀಡಿದ್ದಾರೆ. ಸ್ಪರ್ಧಿಗಳಿಗೆ ಮತ್ತಷ್ಟು ಸಾಥ್ ನೀಡಲು ಅವರ ಕುಟುಂಬದವರ ಎಂಟ್ರಿಯಾಗಿದೆ. ಮನೆಯವರ ಆಗಮನಕ್ಕೆ ಸ್ಪರ್ಧಿಗಳು ಕೂಡ ಭಾವುಕರಾಗಿದ್ದಾರೆ.
ಬಿಗ್ ಬಾಸ್ ಮನೆಗೆ (Bigg Boss House) ಎಂಟ್ರಿ ಕೊಟ್ಟ ಮೇಲೆ ಸ್ಪರ್ಧಿಗಳಿಗೆ ತನ್ನ ಮನೆಯವರ ಜೊತೆ ಯಾವುದೇ ಕನೆಕ್ಷನ್ ಇರೋದಿಲ್ಲ. 9 ವಾರಗಳು ಪೂರೈಸಿ ಮುನ್ನುಗ್ಗುತ್ತಿರುವ ಈ ಮನೆಯಲ್ಲಿ ಸ್ಪರ್ಧಿಗಳಿಗೆ ಮತ್ತಷ್ಟು ಚೈತನ್ಯ ನೀಡಲು ಬಿಗ್ ಬಾಸ್ ಹೊಸ ಹೆಜ್ಜೆ ಇಟ್ಟಿದ್ದಾರೆ. ಸ್ಪರ್ಧಿಗಳನ್ನ ತನ್ನ ಕುಟುಂಬದ ಜೊತೆ ಮಾತನಾಡಲು ಅವಕಾಶ ನೀಡಿದ್ದಾರೆ. ಈ ಕ್ಷಣ ಬಿಗ್ ಬಾಸ್ ಸ್ಪರ್ಧಿಗಳಿಗೆ ತುಂಬಾ ವಿಶೇಷ ಎನಿಸಿದೆ. ಇದನ್ನೂ ಓದಿ: ಜಪಾನ್ ನಲ್ಲಿ ಕುತ್ಕೊಂಡು ತನಗೀಗ 40 ವರ್ಷ ಎಂದು ಘೋಷಿಸಿಕೊಂಡ ರಮ್ಯಾ
ದೊಡ್ಮನೆಯ ಆಟ ಈಗ ಅರ್ಧ ಕ್ರಮಿಸಿ ಮುನ್ನುಗ್ಗಿದೆ. ಎರಡು ತಿಂಗಳಿಗೂ ಅಧಿಕ ದಿನ ಕಳೆದಿದೆ. ಇನ್ನೂ ಒಂದು ತಿಂಗಳಲ್ಲಿ ಶೋ ಕೊನೆಯಾಗಲಿದೆ. 11 ಸ್ಪರ್ಧಿಗಳಿರುವ ಮನೆಯಲ್ಲಿ ಬಿಗ್ ಬಾಸ್‌ನ ಅಚ್ಚರಿಯ ಉಡುಗೊರೆಗೆ ಕಂಬನಿ ಮಿಡಿದಿದ್ದಾರೆ. ಮನೆಗೆ ದಿವ್ಯಾ ಉರುಡುಗ (Divya Uruduga) ತಾಯಿ ಮತ್ತು ರಾಕೇಶ್ (Rakesh Adiga) ತಾಯಿಯ ಆಗಮನ ವಾಗಿದೆ.
ದಿವ್ಯಾ ಅವರ ತಾಯಿ ಮನೆಗೆ ಬಂದಾಗ ತಬ್ಬಿ ಕಣ್ಣೀರಿಟ್ಟಿದ್ದಾರೆ. ದಿವ್ಯಾ ಅವರ ಆಸೆಯಂತೆ ಅವರ ತಾಯಿ ಹಾಡಿದ್ದಾರೆ. ಇನ್ನೂ ಮೊದಲ ಬಾರಿಗೆ ಕ್ಯಾಪ್ಟನ್ ಆಗಿರುವ ರಾಕೇಶ್ ಅಡಿಗ ಬಗ್ಗೆ ರಾಕಿ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ದೊಡ್ಮನೆಗೆ ರಾಕೇಶ್ ತಾಯಿ ಬಂದಿರೋದ್ದಕ್ಕೆ ರಾಕೇಶ್ ಕೂಡ ಭಾವುಕರಾಗಿದ್ದಾರೆ.