ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ, ಇನ್ನೂ ಆನ್ ಲೈನ್ (Online) ದೋಖಾಗಳು ನಿಲ್ಲುತ್ತಿಲ್ಲ. ಅದರಲ್ಲೂ ಸುಶಿಕ್ಷಿತರೇ ಈ ಜಾಲಗಳಿಗೆ ಬಲಿಯಾಗುತ್ತಿದ್ದಾರೆ. ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಿದ್ದಾರೆ. ಇಂಥದ್ದೇ ಪರಿಸ್ಥಿತಿಗೆ ಸಿಲುಕಿದ್ದಾರೆ. ಮಾಜಿ ಬಿಗ್ ಬಾಸ್ (Bigg Boss) ಸ್ಪರ್ಧಿ ಕೀರ್ತಿ ಭಟ್ (Keerti Bhatt) . ಒಂದೇ ಒಂದು ಕ್ಲಿಕ್ ಮಾಡಿ ಬರೋಬ್ಬರಿ ಎರಡು ಲಕ್ಷ ರೂಪಾಯಿಯನ್ನು ಅವರು ಕಳೆದುಕೊಂಡಿದ್ದಾರೆ.
Advertisement
ತಮಗೆ ಆದ ಮೋಸವನ್ನು ತನ್ನದೇ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಮಾಡಿ ಪೊಲೀಸರ ಎದುರು ಕಣ್ಣಿರಿಟ್ಟಿದ್ದಾರೆ. ಕೀರ್ತಿ ಭಟ್ ಅವರಿಗೆ ಕೊರಿಯರ್ ಒಂದು ಬರಬೇಕಿತ್ತು. ವಾರ ಕಳೆದರೂ ಬಂದಿಲ್ಲ. ವಿಚಾರಿಸಲೆಂದೇ ಕೇಂದ್ರ ಕಚೇರಿಕೆ ಕರೆ ಮಾಡಿದ್ದಾರೆ. ಡೆಲಿವರಿ ಆಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ, ಟ್ರ್ಯಾಕ್ ಮಾಡಿದಾಗ ಅದು ಮೆಹದಿಪಟ್ನಂ ಅಲ್ಲಿ ಇರೋದು ಗೊತ್ತಾಗಿದೆ.
Advertisement
Advertisement
ಕೊರಿಯರ್ ಸರ್ವಿಸ್ ಎಂದುಕೊಂಡು ಕೀರ್ತಿಗೆ ಕಾಲ್ ಮಾಡಿದ್ದಾರೆ. ನಿಮ್ಮ ಅಡ್ರೆಸ್ ಟ್ರ್ಯಾಕ್ ಆಗದೇ ಇರುವ ಕಾರಣಕ್ಕಾಗಿ ಪಾರ್ಸಲ್ ತಲುಪಿಲ್ಲ ಎಂದು ಹೇಳಲಿದ್ದಾರೆ. ಸರಿಯಾದ ಅಡ್ರೆಸ್ ವಾಟ್ಸಪ್ ಮಾಡಿ ಅಂದಿದ್ದಾರೆ. ಅವರು ಹೇಳಿದಂತೆ ಕೀರ್ತಿ ವಿಳಾಸ ನೀಡಿದ್ದಾರೆ. ಆದರೆ, ವಾಟ್ಸಪ್ ನಲ್ಲೂ ಅದು ತೋರಿಸ್ತಿಲ್ಲ. ನಾರ್ಮಲ್ ಮಸೇಜ್ ಕಳುಹಿಸುತ್ತೇವೆ. ಅಲ್ಲಿ ಕ್ಲಿಕ್ ಮಾಡಿ ಅಂದಿದ್ದಾರೆ. ನಾರ್ಮಲ್ ಮಸೇಜ್ ಕ್ಲಿಕ್ ಮಾಡಿದಾಗ ಹಣ ಕ್ರಿಮಿನಲ್ ಖಾತೆ ಸೇರಿದೆ.
Advertisement
ಪೊಲೀಸರಿಗೇನೂ ದೂರು ನೀಡಿದ್ದಾರೆ. ವಾಪಸ್ಸು ನಿಮ್ಮ ಹಣ ಬರುತ್ತದೆ ಎಂದು ಪೊಲೀಸರು ಸಮಾಧಾನಿಸಿದ್ದಾರೆ. ಆದರೆ, ಈವರೆಗೂ ಅವರಿಗೆ ಹಣ ವಾಪಸ್ಸು ಬಂದಿಲ್ಲ. ಕೇವಲ ಒಂದು ಕ್ಲಿಕ್ ಮಾಡಿರೋ ತಪ್ಪಿಗೆ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ ಕೀರ್ತಿ.