ಸದ್ಯ ಬಿಗ್ ಬಾಸ್ ಮನೆಯ ಕೇಂದ್ರಬಿಂದು ಆಗಿರುವ ನಟಿ ತನಿಷಾ ಕುಪ್ಪಂಡ ಮತ್ತು ಇತರರು ನಟನೆಯ ‘ಪೆಂಟಗನ್’ ಸಿನಿಮಾ ಹಿಂದಿಯಲ್ಲಿ (Hindi) ಬಿಡುಗಡೆ ಆಗಿದೆ. ‘ಪೆಂಟಗನ್’ ಈಗ ಹಿಂದಿ ಭಾಷೆಯಲ್ಲಿ ‘ಪೆಂಟಗನ್- ಪಾಂಚ್ ಕಾ ಧಮ್’ ಎಂದು dollywood play ನಲ್ಲಿ ಇಂದಿನಿಂದ ಪ್ರಸಾರವಾಗುತ್ತಿದೆ. ಐದು ಕಥೆಗಳು, ಐದು ನಿರ್ದೇಶಕರು ಹಾಗೂ ಹಲವಾರು ನಟರು ಈ ಸಿನಿಮಾದ ಭಾಗವಾಗಿದ್ದಾರೆ. ಗುರು ದೇಶಪಾಂಡೆ (Guru Deshpanda) ಅವರ ನಿರ್ಮಾಣ ಮತ್ತು ಸಾರಥ್ಯದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಮತ್ತು ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಕಿಶೋರ್, ಪ್ರಕಾಶ್ ಬೆಳವಾಡಿ, ರವಿಶಂಕರ್ ಸೇರಿದಂತೆ ಹೆಸರಾಂತ ತಾರಾ ಬಳಗವೇ ಸಿನಿಮಾ ದಲ್ಲಿದೆ.
Advertisement
ನೆನಪಾಗುವ ತನಿಷಾ ವಿವಾದ
Advertisement
ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ತನಿಷಾ ಪೆಂಟಗನ್ ಸಿನಿಮಾದ ಒಂದು ಕಥೆಯಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ಈ ನಟಿಗೆ ಅನೇಕ ರೀತಿಯಲ್ಲಿ ಕಿರುಕುಳ ಆಗಿದೆ ಎಂದು ಈ ಹಿಂದೆ ಆರೋಪ ಮಾಡಿದ್ದರು. ಸಿನಿಮಾ ರಿಲೀಸ್ ವೇಳೆ ಯುಟ್ಯೂಬರ್ ಒಬ್ಬನ ಮೇಲೆ ಆರೋಪ ಮಾಡಿದ್ದ ತನಿಷಾ, ನಂತರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸೂಪರ್ ಹಿಟ್ ಸಿನಿಮಾದ ನಟನೊಬ್ಬನ ಮೇಲೆ ಗುರುತರ ಆರೋಪ ಮಾಡಿದ್ದರು.
Advertisement
Advertisement
ಪೆಂಟಗನ್ (Pentagon) ಸಿನಿಮಾದ ಒಂದು ಕಥೆಯಲ್ಲಿ ತನಿಷಾ ಬೋಲ್ಡ್ ಆಗಿರುವಂಥ ಪಾತ್ರವನ್ನು ನಿರ್ವಹಿಸಿದ್ದಾರೆ. ಅದು ಡೇಟಿಂಗ್ ಆಪ್ ಕುರಿತಾದ ಕಥೆಯಾಗಿದ್ದರಿಂದ, ಪಾತ್ರವೇ ಡಿಮಾಂಡ್ ಮಾಡಿದ್ದರಿಂದ ಅಂಥದ್ದೊಂದು ಪಾತ್ರವನ್ನು ನಿರ್ವಹಿಸಿದ್ದೇನೆ ಎಂದಿದ್ದರು. ಆದರೆ, ರಾಜಾಹುಲಿ ಅಂತಹ ಹಿಟ್ ಸಿನಿಮಾದಲ್ಲಿ ಯಶ್ ಗೆಳೆಯನ ಪಾತ್ರ ಮಾಡಿದ್ದ ನಟನೊಬ್ಬ ತನಿಷಾಗೆ ಬ್ಲೂಫಿಲ್ಮ್ ಮಾಡ್ತೀಯಾ ಎಂದು ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನೆ ಮಾಡಿದ್ದಾರಂತೆ. ಆ ನಟನ ಬಗ್ಗೆ ಮಾತನಾಡಿದ ತನಿಷಾ ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರಿಟ್ಟಿದ್ದರು.
ಪೆಂಟಗನ್ ಸಿನಿಮಾದಲ್ಲಿ ಒಟ್ಟು ಐದು ಕಥೆಗಳಿವೆ. ಕನ್ನಡದ ಪ್ರೇಮ, ಸಾಮಾಜಿಕ ಸಂದೇಶ ಹಾಗೂ ಮನರಂಜನೆ ನೀಡುವಂತಹ ಎಲ್ಲ ಅಂಶಗಳು ಇದ್ದರೂ, ಕೇವಲ ಒಂದೇ ಒಂದು ಕಥೆಯ ಬಗ್ಗೆ ಈ ರೀತಿ ಮಾತನಾಡುವುದು ಸರಿ ಅಲ್ಲ ಎನ್ನುವುದು ತನಿಷಾ ಮಾತಾಗಿತ್ತು. ಐದು ಪ್ರತಿಭಾವಂತ ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅವರು ನನ್ನಿಂದ ಕೆಟ್ಟ ರೀತಿಯಲ್ಲಿ ಪಾತ್ರ ಮಾಡಲು ಸಾಧ್ಯವಾ ಎನ್ನುವುದು ಅವರ ಪ್ರಶ್ನೆಯಾಗಿತ್ತು.
`ಮಂಗಳಗೌರಿ ಮದುವೆ’ (Mangala Gowri Maduve) ಸೀರಿಯಲ್‌ನಲ್ಲಿ ಖಡಕ್ ವಿಲನ್ ಆಗಿ ಮನಗೆದ್ದ ತನಿಷಾ ಕುಪ್ಪಂಡ (Tanisha Kuppanda) ಅವರು (ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಯೂಟ್ಯೂಬರ್ ಅಸಭ್ಯ ಪ್ರಶ್ನೆಗೆ ತನಿಷಾ ಖಡಕ್ ವಾರ್ನಿಂಗ್ ಕೊಟ್ಟಿದ್ದರು.
ನೀವು ನೀಲಿ ಚಿತ್ರದಲ್ಲಿ ನಟಿಸಲು ಸಿದ್ಧವಿದ್ದೀರಾ? ಎಂದು ಓರ್ವ ಯೂಟ್ಯೂಬರ್ ಪ್ರಶ್ನೆ ಮಾಡಿದ್ದರು. ಆಗ ಸಿಟ್ಟಾದ ತನಿಷಾ ಕುಪ್ಪಂಡ ಹಾಗಿದ್ರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ನೀಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು. ಬೋಲ್ಡ್ ಆಗಿ ನಟಿಸಿದ್ದೀವಿ ಅಂದ ಮಾತ್ರಕ್ಕೆ. ಈ ತರಹ ಪ್ರಶ್ನೆ ಕೇಳೋದ್ರಲ್ಲಿ ಅರ್ಥವೇ ಇಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ? ಎಂದು ಹೇಳಿ ಸಂದರ್ಶನವನ್ನ ಮೊಟಕುಗೊಳಿಸಿದ್ದರು.
Web Stories