Connect with us

Bengaluru City

ಬಿಗ್‍ಬಾಸ್ ಮನೆಯಲ್ಲಿ ಮುತ್ತು ಕೊಟ್ಟ ಸೋನು – ಕಿಸ್ ಪಡೆದವ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದ

Published

on

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‍ಬಾಸ್ ನಲ್ಲಿ ಪ್ರತಿ ಸೀಸನ್ ನಲ್ಲಿ ಒಂದು ಜೋಡಿ ಸ್ಪರ್ಧಿಗಳ ನಡುವೆ ಪ್ರೀತಿ ಇದೆ ಎಂಬ ಗಾಸಿಪ್ ಇರುತ್ತದೆ. ಅದೇ ರೀತಿ ಈ ಬಾರಿಯೂ ಸೀಸನ್ 6 ರಲ್ಲಿ ಸ್ಪರ್ಧಿ ಸೋನು ಪಾಟೀಲ್ ಮತ್ತು ಗಾಯಕ ನವೀನ್ ಇಬ್ಬರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ನವೀನ್ ಮತ್ತು ಸೋನು ಪಾಟೀಲ್ ಮಧ್ಯೆ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಅಷ್ಟೇ ಅಲ್ಲದೇ ಈ ನಡುವೆ ಸೋನು ಎಲ್ಲರ ಮುಂದೆ ನವೀನ್ ಗೆ ಐ ಲವ್ ಯೂ ಎಂದು ಹೇಳಿದ್ದರು. ಈಗ ಸೋನು ಪಾಟೀಲ್ ನವೀನ್ ಗೆ ಕಿಸ್ ಕೊಡುವ ಮೂಲಕ ಬಿಗ್‍ಬಾಸ್ ಮನೆಯ ಇತರೆ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದ್ದಾರೆ.


ಬಿಗ್ ಬಾಸ್ ಶೋ ಪ್ರತಿದಿನ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಈ ದಿನ ಬಿಗ್‍ಬಾಸ್ ಮನೆ ಮಂದಿಗೆ ಕ್ರೇಜಿಟಾಸ್ಕ್ ಕೊಡಲಾಗಿದೆ. ಈ ಟಾಸ್ಕ್ ನಲ್ಲಿ ಎಲ್ಲರೂ ಒಂದೊಂದು ರೀತಿಯ ಟಾಸ್ಕ್ ಮಾಡುತ್ತಾರೆ. ಈ ವೇಳೆ ಸೋನು ಪಾಟೀಲ್ ಎಲ್ಲರ ಮುಂದೆ ನವೀನ್ ಕೆನ್ನೆಗೆ ಕಿಸ್ ಕೊಟ್ಟಿದ್ದಾರೆ. ಸೋನು ಕಿಸ್ ಕೊಟ್ಟ ಬಳಿಕ ನವೀನ್ ಅಲ್ಲಿನ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದಿದ್ದಾರೆ. ಈ ವೇಳೆ ಸೋನು ‘ಬೇಡ’ ಎಂದು ಹೇಳಿರುವ ಪ್ರೋಮೋ ಪ್ರಸಾರವಾಗುತ್ತಿದೆ. ಆದರೆ ಬಿಗ್‍ಬಾಸ್ ನೀಡಿದ್ದ ಕ್ರೇಜಿ ಟಾಸ್ಕ್ ಏನು ಎಂದು ಯಾರಿಗೂ ತಿಳಿದಿಲ್ಲ. ಇಂದಿನ ಎಪಿಸೋಡ್ ನಲ್ಲಿ ಪ್ರಸಾರವಾಗುತ್ತದೆ.

ಈ ಹಿಂದೆ ನವೀನ್ ತಮ್ಮ ಜರ್ಕಿನ್ ಕೊಟ್ಟಿದ್ದಕ್ಕೆ ಸೋನು ನೀನು ನನಗೆ ಒಳ್ಳೆಯ ಸ್ನೇಹಿತನಾಗಿದ್ದೀಯಾ. ಹಾಗಾಗಿ ನಿನಗೆ ಐ ಲವ್ ಯೂ ಅಂತ ಬಿಗ್‍ಬಾಸ್ ಚಟುವಟಿಕೆಯಲ್ಲಿ ಹೇಳಿದ್ದರು. ಈ ಬಳಿಕ ಮನೆಯಲ್ಲಿದ್ದವರು ನವೀನ್ ಹಾಗೂ ಸೋನು ಬಗ್ಗೆ ಮಾತನಾಡಲು ಶುರು ಮಾಡಿದರು. ಇತರರ ಮಾತುಗಳಿಂದ ಕೋಪಗೊಂಡ ಸೋನು ಪಾಟೀಲ್, ನೀನು ನನಗೆ ಸ್ನೇಹಿತನಾಗಿ ಇಷ್ಟ. ಲವ್ ಮಾಡಿದರೆ ನಾನು ನಿನ್ನೇ ಲವ್ ಮಾಡುತ್ತೀನಿ. ಅದು ಏನ್ ಮಾಡಿಕೊಳ್ಳುತ್ತೀಯೋ ಮಾಡಿಕೋ ಎಂದು ಸವಾಲು ಹಾಕಿ ಬೇರೆ ಕಡೆ ನಡೆದಿದ್ದರು.

ಮೂರನೇ ವಾರದ ಟಾಸ್ಕ್ ನಲ್ಲಿ ಹಾವಿನ ದ್ವೇಷ ಟಾಸ್ಕ್ ನಲ್ಲಿ ಸೋತು ಬಿಗ್‍ಬಾಸ್ ಮನೆಯ ಅಂಗಳದಲ್ಲಿ ನಿರ್ಮಿಸಲಾಗಿದ್ದ ಕೃತಕ ಸ್ಮಶಾನದಲ್ಲಿ ಕುಳಿತಕೊಳ್ಳಬೇಕಿತ್ತು. ಸ್ಮಶಾನದ ಅಂಗಳ ಸೇರಿದ ಸ್ಪರ್ಧಿ ಭೂತದ ರೀತಿಯಲ್ಲಿ ಬಿಗ್ ಬಾಸ್ ನೀಡುವ ಬಿಳಿ ಬಟ್ಟೆ ಧರಿಸಿ ನಟಿಸಬೇಕಿತ್ತು. ಟಾಸ್ಕ್ ನಲ್ಲಿ ಲಕ್ಷುರಿ ಅಂಕಗಳನ್ನು ಕಳೆದುಕೊಂಡ ಸೋನು ಸ್ಮಶಾನ ಸೇರಬೇಕಿತ್ತು. ಈ ವೇಳೆ ತಾನೇ ಬಿಗ್‍ಬಾಸ್ ಮನೆಯಲ್ಲಿ ನನ್ನ ಲವ್ ಸ್ಟಾರ್ಟ್ ಆಗಿತ್ತು. ಇಷ್ಟು ಬೇಗ ನನಗೆ ಸ್ಮಶಾನ ಸೇರುವ ಪರಿಸ್ಥಿತಿ ಬಂತು ಎಂಬ ಮಾತುಗಳನ್ನಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *