ಮೊದಲ ಮಗುವಿಗೆ ತಾಯಿ ಆಗುತ್ತಿದ್ದಾರೆ ಬಿಗ್ ಬಾಸ್ ಸ್ಪರ್ಧಿ ರುಬಿನಾ

Public TV
1 Min Read
Rubina Dilaik 3

ರುಬಿನಾ ದಿಲಾಯಕ್ (Rubina Dilayak) ತಾಯಿ ಆಗುತ್ತಿದ್ದಾರೆ. ಈ ಸಂತಸದ ಸುದ್ದಿಯನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಇವರು, ಮಾಡೆಲಿಂಗ್ ಮತ್ತು ಕಿರುತೆರೆ ಜಗತ್ತಿನಲ್ಲಿ ಹೆಸರು ಮಾಡಿದವರು. ಅಲ್ಲದೇ, ಬಿಗ್ ಬಾಸ್ ವಿನ್ನರ್ ಆಗಿಯೂ ಹೊರ ಹೊಮ್ಮಿದವರು. ಹೊರ ದೇಶದಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿರುವ ರುಬಿಯಾ, ಅಲ್ಲಿಂದಲೇ ಸಂತಸದ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

Rubina Dilaik 1

ಅಭಿನವ್ ಶುಕ್ಲಾ (Abhinav Shukla) ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಈ ಹಿಂದೆಯೇ ಅವರು ಹೇಳಿಕೊಂಡಿದ್ದರು. ಇವರ ಸ್ನೇಹ ಡೇಟಿಂಗ್ ಗೆ ಮಾತ್ರ ಸೀಮಿತವಾಗಿರಲಿದೆ ಎಂದು ಹಲವರು  ಅಂದುಕೊಂಡಿದ್ದರು. ಆದರೆ, 2018ರಲ್ಲಿ ಅಭಿನವ್ ಜೊತೆ ಮದುವೆ ಆಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಐದು ವರ್ಷಗಳ ನಂತರ ತಾಯಿ ಆಗುತ್ತಿದ್ದಾರೆ. ಇದನ್ನೂ ಓದಿ:ತೆಲುಗಿಗೆ ರಕ್ಷಿತ್‌ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ- ರಿಲೀಸ್‌ ಡೇಟ್‌ ಫಿಕ್ಸ್

Rubina Dilaik 2

ಅಭಿನವ್ ಮತ್ತು ರುಬಿಯಾ ಮೊದ ಮೊದಲ ಸ್ನೇಹಿತರು. ಆ ನಂತರ ಪ್ರೇಮಿಗಳಾದರು. ಇಬ್ಬರೂ ಕುಟುಂಬದ ಒಪ್ಪಿಗೆ ಪಡೆದುಕೊಂಡು ಶಿಮ್ಲಾದಲ್ಲಿ ಮದುವೆಯಾದರು. ಮೊದಲು ಪ್ರಪೋಸ್ ಮಾಡಿದ್ದು ಅಭಿನವ್ ಎಂದು ಬಿಗ್ ಬಾಸ್ ಮನೆಯಲ್ಲಿ ತಮ್ಮ ಲವ್ ಸ್ಟೋರಿಯನ್ನು ಹಂಚಿಕೊಂಡಿದ್ದರು ರುಬಿಯಾ.

 

‘ನಾವಿಬ್ಬರೂ ಒಬ್ಬರಿಗೊಬ್ಬರು ಇಷ್ಟಪಟ್ಟೆವು. ಕಾಮನ್ ಸ್ನೇಹಿತರ ಮನೆಯಲ್ಲಿ ಮೊದಲು ಭೇಟಿಯಾಗಿದ್ದು. ನಾವಿಬ್ಬರೂ  ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡೆ, ಹೊಸ ಜೀವನಕ್ಕೆ ಕಾಲಿಡಲು ಹೊರಟೆವು. ಇದೀಗ ನಾವು ಅದ್ಭುತವಾಗಿ ಜೀವನವನ್ನು ಸಾಗಿಸುತ್ತಿದ್ದೇವೆ’ ಎನ್ನುವ ವಿಚಾರವನ್ನು ಹಲವು ಬಾರಿ ಅವರು ಮಾತನಾಡಿದ್ದಾರೆ.

Web Stories

Share This Article