ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸ್ಪರ್ಧಿಯಾಗಿದ್ದ ಲಾಸ್ಯ ನಾಗರಾಜ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ಬಿಗ್ ಬಾಸ್ನ ಕಳೆದ ಸೀಸನ್ ಸ್ಪರ್ಧಿ ಆಗಿದ್ದ ಲಾಸ್ಯ ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದಾರೆ. ಲಾಸ್ಯ ಅನೇಕ ಫೋಟೋಶೂಟ್ ಮಾಡಿಸಿದ್ದಾರೆ. ಆದರೆ ಈ ಬಾರಿ ಲಾಸ್ಯ ಬ್ಯಾಕ್ ಲೆಸ್ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ.
ಲಾಸ್ಯ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅದಕ್ಕೆ, “ಇದಕ್ಕಿಂತ ಬೇರೆ ರೀತಿಯಿರಲು ಸಾಧ್ಯವಿದ್ದೀಯಾ? ಇದು ನನ್ನ ದೇಹ, ನನ್ನ ಆತ್ನ. ನಾನು ಇದರಲ್ಲಿ ಜೀವಿಸಬೇಕು. ಮಹಿಳೆಯರು ಅವರು ಹೇಗಿದ್ದಾರೋ ಹಾಗೇ ಇರಬೇಕು. ನನ್ನ ಪ್ರಕಾರ ನಮ್ಮ ಸ್ವಂತ ತ್ವಚೆಯಲ್ಲೇ ನಾವು ಇರಬೇಕೆಂದು” ಬರೆದು ಪೋಸ್ಟ್ ಮಾಡಿದ್ದಾರೆ.
ಅಲ್ಲದೇ ಈ ಫೋಟೋಗೆ ಕೆಟ್ಟ ಕಮೆಂಟ್ಸ್ ಬಂದರೆ ನಾನು ಸಹಿಸುವುದಿಲ್ಲ. ಈ ಫೋಟೋವನ್ನು ಯಾರಾದರೂ ದುರುಪಯೋಗ ಮಾಡಿದ್ದರೆ ಸೈಬರ್ ಕ್ರೈಂಗೆ ದೂರು ನೀಡುತ್ತೇನೆ. ನನ್ನನ್ನು ಗೌರವಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಲಾಸ್ಯ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಲಾಸ್ಯ ಅವರ ಈ ಫೋಟೋವನ್ನು ಸಮುಖ ಎಂಬವರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಲಾಸ್ಯ ಅವರ ಈ ಫೋಟೋ ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಲಾಸ್ಯ ಅವರು ನಟಿ ಸಂಯುಕ್ತಾ ಹೆಗಡೆ ಜೊತೆ ಬಿಗ್ ಮನೆಗೆ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿ ಕೊಟ್ಟಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv