ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಾವಾಗಲೂ ಒಂದು ಜೋಡಿ ಮಧ್ಯೆ ಗಾಸಿಪ್ ಹರಿದಾಡುತ್ತಿದೆ. ಅದೇ ರೀತಿ ಬಿಗ್‍ಬಾಸ್ ಸೀನಸ್ 6ರಲ್ಲಿ ರಾಕೇಶ್ ಮತ್ತು ಅಕ್ಷತಾ ಯಾವಾಗಲೂ ಜೊತೆಯಲ್ಲಿರುತ್ತಾರೆ. ಆದ್ದರಿಂದ ಇವರಿಬ್ಬರ ಬಗ್ಗೆ ಗಾಸಿಪ್ ಇದೆ. ಆದರೆ ಈಗ ಸ್ಪರ್ಧಿ ಕವಿತಾ ಮತ್ತು ರಾಕೇಶ್ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ.
ಬಿಗ್‍ಬಾಸ್ ಮನೆಯ ಎಲ್ಲ ಸ್ಪರ್ಧಿಗಳಿಗೂ ಒಂದು ಟಾಸ್ಕ್ ನೀಡಿತ್ತು. ಅದೆನೆಂದರೆ ‘ಇಷ್ಟ ಕಷ್ಟ’. ಈ ಟಾಸ್ಕ್ ನ ಪ್ರಕಾರ ತಮಗೆ ಇಷ್ಟ ಆಗುವ ಒಬ್ಬರಿಗೆ ಸ್ಪರ್ಧಿಗಳು ಹಾರ ಹಾಕಬೇಕಿತ್ತು. ಇಷ್ಟ ಪಡದ ಇಬ್ಬರು ಸದಸ್ಯರ ಮುಖಕ್ಕೆ ಸ್ಪರ್ಧಿಗಳು ಮಸಿ ಬಳಿಯಬೇಕಿತ್ತು.
ಕಳೆದ ವಾರ ಆಂಡ್ರ್ಯೂ ಮತ್ತು ಕವಿತಾ ಮಧ್ಯೆ ಜಗಳವಾಗಿತ್ತು. ಇದರಿಂದ ಮನೆಯಲ್ಲಿ ಎಲ್ಲರಿಗೂ ಬೇಸರವಾಗಿತ್ತು. ಕೊನೆಗೆ ಕವಿತಾ ಅವರು ಆಂಡ್ರ್ಯೂ ಬಳಿ ಕ್ಷಮೆ ಕೇಳಿದ್ದರು. ಇದರಿಂದ ರಾಕೇಶ್ ಕವಿತಾ ಗುಣವನ್ನು ಅಭಿನಂದಿಸಿ ಹಾರ ಹಾಕಿದರು. ಇತ್ತ ಬೇಸರದಿಂದ ಇದ್ದ ಕವಿತಾ ಜೊತೆ ಸಂತೋಷದಿಂದ ಮಾತನಾಡಿದ್ದಕ್ಕೆ ಕವಿತಾ ಕೂಡ ರಾಕೇಶ್‍ಗೆ ಹಾರ ಹಾಕಿದರು. ಹೀಗಾಗಿ ‘ಇಷ್ಟ ಕಷ್ಟ’ ಟಾಸ್ಕ್ ನಲ್ಲಿ ಕವಿತಾ-ರಾಕೇಶ್ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ.
‘ಇಷ್ಟ ಕಷ್ಟ’ ಟಾಸ್ಕ್ ನಲ್ಲಿ ಬರೀ ಕವಿತಾ-ರಾಕೇಶ್ ಮಾತ್ರ ಹಾರ ಹಾಕಿಲ್ಲ. ಶಶಿ-ಧನರಾಜ್ ಹಾಗೂ ರಶ್ಮಿ-ಮುರಳಿ ಕೂಡ ಪರಸ್ಪರ ಹಾರ ಹಾಕಿಕೊಂಡಿದ್ದಾರೆ.
ರಾಕೇಶ್ ಮತ್ತು ಅಕ್ಷತಾ ಇಬ್ಬರ ನಡುವೆ ಗಾಸಿಪ್ ಇದೆ ಎಂದು ಮಾತನಾಡಿಕೊಳ್ಳುತ್ತಿದಾಗ, ‘ನಾವಿಬ್ಬರು ಒಳ್ಳೆಯ ಗೆಳೆಯರು’ ಎಂದು ರಾಕೇಶ್ ಎಲ್ಲರ ಮುಂದೆ ಸ್ಪಷ್ಟಪಡಿಸಿದ್ದರು. ಆಗ ಕೂಡಲೇ ಅಕ್ಷತಾ ‘ಐ ಲವ್ ಯು ರಾಕಿ” ಅಂತ ಬಹಿರಂಗವಾಗಿ ಹೇಳಿದ್ದರು. ಇದರಿಂದ ಸ್ಪರ್ಧಿಗಳು ಗೊಂದಲಕ್ಕೀಡಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv