ಬೆಂಗಳೂರು: ಬಿಗ್ ಬಾಸ್ ಸೀಸನ್-3 ಸ್ಪರ್ಧಿಯಾಗಿದ್ದ ನಟಿ ಗೌತಮಿ ಗೌಡ ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.
ನಟಿ ಗೌತಮಿ ಗೌಡ ಇದೇ ತಿಂಗಳು 19ರಂದು ತನ್ನ ಗೆಳೆಯ ಜಾರ್ಜ್ ಕ್ರಿಸ್ಟ್ ಜೊತೆ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ಗೌತಮಿ ಹಾಗೂ ಜಾರ್ಜ್ ಅವರ ವಿವಾಹ ಮಹೋತ್ಸವ ಪ್ಯಾಲಸ್ ಗ್ರೌಂಡ್ನಲ್ಲಿ ನಡೆಯಲಿದೆ.
Advertisement
ಗೌತಮಿ ಕೆಲವು ವರ್ಷಗಳಿಂದ ಜಾರ್ಜ್ ಕ್ರಿಸ್ಟ್ ಅವರನ್ನು ಪ್ರೀತಿಸುತ್ತಿದ್ದರು. ನಂತರ ಇವರ ಎರಡು ಕುಟುಂಬದವರು ಒಪ್ಪಿಗೆ ಮೇರೆಗೆ ಗುರು-ಹಿರಿಯರ ಸಮ್ಮುಖದಲ್ಲಿ ಗೌತಮಿ ಗೌಡ ಹಾಗು ಜಾರ್ಜ್ ಕ್ರಿಸ್ಟಿ ಅವರ ನಿಶ್ಚಿತಾರ್ಥ ನಡೆದಿತ್ತು. ಸದ್ಯ ಈಗ ನಡೆಯುತ್ತಿರುವ ಮದುವೆಯಲ್ಲಿ ಸಿನಿಮಾರಂಗದ ಗಣ್ಯರು, ಕಿರುತೆರೆ ಕಲಾವಿದರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಸಪ್ತಪದಿ ತುಳಿಯಲು ಸಿದ್ಧರಾದ ಬಿಗ್ ಬಾಸ್ ಸ್ಪರ್ಧಿ
Advertisement
Advertisement
ಗೌತಮಿ ಗೌಡ ತಾವು ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗುವ ಖುಷಿಯಲ್ಲಿದ್ದಾರೆ. ಗೌತಮಿ ಏಪ್ರಿಲ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಲ್ಲದೇ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ತಮ್ಮ ಇನ್ಸ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿ ಸಂತಸವನ್ನು ಹಂಚಿಕೊಂಡಿದ್ದರು.
Advertisement
ಗೌತಮಿ ಖಾಸಗಿ ವಾಹಿನಿಯ ಒಂದು ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ಆ ಧಾರಾವಾಹಿಯ ಮೂಲಕವೇ ಖ್ಯಾತಿ ಪಡೆದು, ನಂತರ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆದ ಬಿಗ್ ಬಾಸ್ ಸ್ಪರ್ಧಿಯಾಗಿದ್ದರು. ಗೌತಮಿ ಕಿರುತೆರೆ ಮಾತ್ರವಲ್ಲದೇ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಸದ್ಯ ಗೌತಮಿ ‘ಅಂಬಿ ನಿಂಗ್ ವಯ್ಯಸ್ಸಾಯ್ತೋ’ ಹಾಗೂ ‘ಪೂರ್ಣ ಸತ್ಯ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಮದುವೆ ನಂತರವೂ ಸಿನಿಮಾರಂಗದಲ್ಲಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.