ಗಾಂಜಾ ಸಮೇತ ಪೊಲೀಸರಿಗೆ ಸಿಕ್ಕಿಬಿದ್ದ ಬಿಗ್ ಬಾಸ್ ಸ್ಪರ್ಧಿ

Public TV
1 Min Read
Shanmukh Jaswant 2

ಹೋದರನ ಕೇಸ್ ಹುಡುಕಿಕೊಂಡು ಮನೆಗೆ ಬಂದ ಪೊಲೀಸರಿಗೆ ಗಾಂಜಾ ಸಮೇತ ಸಿಕ್ಕಿ ಬಿದ್ದಿದ್ದಾರೆ ತೆಲುಗಿನ ಖ್ಯಾತ ಯೂಟ್ಯೂಬರ್ ಹಾಗೂ ಬಿಗ್ ಬಾಸ್ ರನ್ನರಪ್ ಆಗಿದ್ದ ಶಾನು ಅಲಿಯಾಸ್ ಷಣ್ಮುಖ್ ಜಸ್ವಂತ್. ಮನೆಗೆ ಪೊಲೀಸರು ಬಂದಾಗ ಶಾನು ಗಾಂಜಾ ಸೇವಿಸುತ್ತಿದ್ದ ಎಂದು ಅಲ್ಲಿನ ಮಾಧ್ಯಮಗಳ ವರದಿ ಮಾಡಿವೆ.

Shanmukh Jaswant 1

ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿದವರು ಶಾನು, ಕೋಟ್ಯಂತರ ಫಾಲೋವರ್ಸ್ ಇವರು ನಡೆಸುವ ಯುಟ್ಯೂಬ್ ಚಾನೆಲ್ ಗೆ ಇದ್ದಾರೆ. ಈ ಕಾರಣದಿಂದಾಗಿಯೇ ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಕೂಡ ಸಿಕ್ಕಿತ್ತು. ಇದೀಗ ಸಲ್ಲದ ಕಾರಣಕ್ಕಾಗಿ ಶಾನು ಸದ್ದು ಮಾಡುತ್ತಿದ್ದಾರೆ. ಅವರ ತಮ್ಮ ಸಂಪತ್ ವಿನಯ್ ಮಾಡಿದ ತಪ್ಪಿಗೆ ಶಾನು ಪೊಲೀಸರಿಗೆ ಅತಿಥಿ ಆಗುವಂತಾಗಿದೆ.

Shanmukh Jaswant 3

ಈ ಹಿಂದೆ ವೈದ್ಯ ಗೆಳತಿಯೊಂದಿಗೆ ಸಂಪತ್ ವಿನಯ್ ಲೀವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರಂತೆ. ನಂತರ ನಿಶ್ಚಿತಾರ್ಥ ಕೂಡ ಆಗಿತ್ತು. ಆ ಹುಡುಗಿಯ ತಾಯಿಯ ಆರೋಗ್ಯ ಹದಗೆಟ್ಟಿದ್ದರಿಂದ ಮದುವೆಯನ್ನು ಮುಂದೂಡಲಾಗಿತ್ತು. ಅಷ್ಟರಲ್ಲಿ ನಿಶ್ಚಿತಾರ್ಥ ಕೂಡ ಮುರಿದು ಬಿದ್ದಿತ್ತು. ನಂತರ ಸಂಪತ್ ಬೇರೆ ಹುಡುಗಿಯೊಂದಿಗೆ ಮದುವೆ ಆಗಿದ್ದರಂತೆ. ಇದನ್ನು ಪ್ರಶ್ನಿಸಿ ವೈದ್ಯ ಗೆಳತಿ ಪೊಲೀಸರಿಗೆ ದೂರು ನೀಡಿದ್ದರು.

 

ದೂರನ್ನು ಆಧರಿಸಿ ಪೊಲೀಸರು ಸಂಪತ್ ನನ್ನು ಹುಡುಕಿಕೊಂಡು ಅವರು ವಾಸವಿದ್ದ ಮನೆಗೆ ಬಂದಿದ್ದಾರೆ. ಆಗ ಸಂಪತ್ ಮನೆಯಲ್ಲಿ ಇರಲಿಲ್ಲ. ಶಾನು ಆ ವೇಳೆಯಲ್ಲಿ ಗಾಂಜಾ ಸೇವಿಸುತ್ತಿದ್ದರಂತೆ. ತಮ್ಮನನ್ನು ಲಾಕ್ ಮಾಡಲು ಹೋಗಿದ್ದ ಪೊಲೀಸರು ಅಣ್ಣನನ್ನು ಸ್ಟೇಷನ್ ಗೆ ಕರೆದುಕೊಂಡು ಬಂದಿದ್ದಾರೆ.

Share This Article