ಬೆಂಗಳೂರು: ಬಿಗ್ ಬಾಸ್ ಸೀಸನ್ ಸ್ಪರ್ಧಿ ಕವಿತಾ ಗೌಡಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆ್ಯಂಡಿ ಇಂದು ರಾಜ್ಯ ಮಹಿಳಾ ಆಯೋಗದ ಮುಂದೆ ಹಾಜರಾಗಿದ್ದಾರೆ.
ರಾಜ್ಯ ಮಹಿಳಾ ಆಯೋಗವು ಕವಿತಾ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು ಆ್ಯಂಡಿ ಹಾಗೂ ಕವಿತಾರನ್ನು ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಲಿದ್ದಾರೆ. ಸದ್ಯ ಆ್ಯಂಡಿ ಮಾತ್ರ ವಿಚಾರಣೆಗೆ ಹಾಜರಾಗಿದ್ದು, ಕವಿತಾ ಹಾಜರಾಗಬೇಕಿದೆ.
ಏನಿದು ಪ್ರಕರಣ?
ಟಾಸ್ಕ್ ಹೊರತಾಗಿಯೂ ಆ್ಯಂಡಿ ನಡೆದುಕೊಂಡ ರೀತಿ ನನಗೆ ಇಷ್ಟವಾಗಲಿಲ್ಲ. ಇತ್ತೀಚೆಗೆ ನಡೆದ ಖಾಸಗಿ ವಾಹಿನಿ ಶೋದಲ್ಲಿ ಉಂಟಾದ ಅಹಿತಕರ ಘಟನೆಯಿಂದ ದೂರು ದಾಖಲಿಸಲು ನಿರ್ಧರಿಸಿದ್ದೇನೆ. ಟಾಸ್ಕ್ ನಲ್ಲಿಯೇ ಆ್ಯಂಡಿ ಏನಾದರು ಮಾಡಲು ಪ್ರಯತ್ನಿಸುತ್ತಿದ್ದರು. ಎರಡು ದಿನ ನಡೆದಿದ್ದ ಸೂಪರ್ ಹೀರೋ ವರ್ಸಸ್ ಸೂಪರ್ ವಿಲನ್ ಟಾಸ್ಕ್ ನಲ್ಲಿ ಆ್ಯಂಡಿ ತುಂಬಾ ಕಿರುಕುಳ ನೀಡಿದ್ದರು. ಆ ಟಾಸ್ಕ್ ನ ದೃಶ್ಯಗಳು ವೂಟ್‍ನಲ್ಲಿ ಸಿಕ್ಕಿವೆ. ಬಿಗ್‍ಬಾಸ್ ಮನೆಯಿಂದ ಹೊರಗೆ ಬಂದು ನೋಡಿದಾಗ ಆ್ಯಂಡಿ ವರ್ತನೆ ಮುಜುಗುರಕ್ಕೆ ಉಂಟು ಮಾಡಿತು ಎಂದು ಕವಿತಾ ಅವರು ಆ್ಯಂಡಿ ಮೇಲೆ ಆರೋಪಿಸಿದ್ದರು.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಆ್ಯಂಡಿ, “ಬಿಗ್ ಬಸ್ ಮನೆಯಲ್ಲಿ ಎಷ್ಟೋ ಕ್ಯಾಮೆರಾಗಳಿದ್ದವು. ಅಲ್ಲಿ ಕವಿತಾ ಅವರಿಗೆ ತೊಂದರೆ ಆದಾಗ ಅವರು ಅಲ್ಲೇ ದೂರು ನೀಡಬಹುದಿತ್ತು. ಅಲ್ಲಿ ಚೆನ್ನಾಗಿ ಆಟವಾಡಿಕೊಂಡು ಜೊತೆಯಲ್ಲಿ ಊಟ ಮಾಡಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ನಾನು ಅವರಿಗೆ ಹೆಡ್ ಮಸಾಜ್ ಮಾಡಿದೆ. ಆಗ ಅವರು ಮಾಡಿಸಿಕೊಂಡಿದ್ದರು. ಆಗ ಅವರಿಗೆ ಏಕೆ ತೊಂದರೆ ಆಗಲಿಲ್ಲ. ಆಗ ಅವರು ಏಕೆ ಏನೂ ಹೇಳಲಿಲ್ಲ. ಆಗ ಸುಮ್ಮನಿದ್ದು ಈಗ ಏಕೆ ಅವರು ದೊಡ್ಡ ಸಮಸ್ಯೆ ಮಾಡಬೇಕು. ಬಿಗ್ ಬಾಸ್ ಮನೆಯಲ್ಲಿ ಯಾರಿಗಾದರೂ ತೊಂದರೆ ಆದರೆ ಅವರು ಕ್ಯಾಮೆರಾ ಮುಂದೆ ಹೇಳುವ ಅವಕಾಶ ಇದೆ. 100 ದಿನ ಆಟವಾಡಬೇಕು ಎಂದು ಅಲ್ಲಿ ಇದ್ದು, ಬಳಿಕ ಆಟ ಗೆಲಿಲ್ಲ ಎಂದಾಗ ಹೀಗೆ ಮಾಡುವುದು ಸರಿಯಲ್ಲ” ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv