ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಸ್ಟ್ರಾಂಗ್ ಸ್ಪರ್ಧಿಯಾಗಿ ಮನಗೆದ್ದಿದ್ದ ಸಂಗೀತಾ ಶೃಂಗೇರಿ (Sangeetha Sringeri) ಇದೀಗ ರಾಂಗ್ ಆಗಿದ್ದಾರೆ. ಆಟ ನೆಪದಲ್ಲಿ ಮಾನವೀಯತೆ ಮರೆತ ಸಂಗೀತಾಗೆ ಬಿಗ್ ಬಾಸ್ ಮಾನವೀಯ ಮೌಲ್ಯದ ಬಗ್ಗೆ ಪಾಠ ಮಾಡಿದ್ದಾರೆ. ಸಂಗೀತಾ ನಿರ್ಧಾರವನ್ನ ಬಿಗ್ ಬಾಸ್ ಖಂಡಿಸಿದ್ದಾರೆ.
Advertisement
ಮಾನವೀಯತೆ, ಮನುಷ್ಯತ್ವ, ಮನೆಯ ಜವಾಬ್ದಾರಿ, ಮನೆಯಲ್ಲಿ ಏನು ಇಲ್ಲದೆ ಇದ್ದಾಗ ಟಾಸ್ಕ್ ಆಡಿ ಎಲ್ಲವನ್ನು ಪಡೆದುಕೊಳ್ಳುವ ಶಕ್ತಿಯೂ ಇರಬೇಕು. ಟಾಸ್ಕ್‌ನಲ್ಲಿ ಮರೆತ ಮನುಷ್ಯತ್ವವನ್ನು ಬಿಗ್ ಬಾಸ್ (Bigg Boss Kannada) ಸ್ಮರಣೆಗೆ ತಂದಿದ್ದಾರೆ. ಹಳಿ ತಪ್ಪಿರೋ ಸಂಗೀತಾ ಯೋಚನೆಗೆ ಬ್ರೇಕ್ ಹಾಕಿದ್ದಾರೆ.
Advertisement
Advertisement
ಈ ವಾರ ಬಿಗ್ ಬಾಸ್ ಟಾಸ್ಕ್ ಗಾಗಿ 2 ತಂಡಗಳಾಗಿ ವಿಂಗಡಿಸಿದ್ದರು. ಮೈಕಲ್ & ಸಂಗೀತಾ ಎರಡು ಟೀಮ್ ಆಗಿತ್ತು. ಸಂಗೀತಾ ಟೀಮ್ ಗೆ ಗಜಕೇಸರಿ ಎಂದು ಹೆಸರಿಟ್ಟರೇ , ಮೈಕಲ್ ಟೀಮ್ ಗೆ ಸಂಪತ್ತಿಗೆ ಸವಾಲ್ ಎಂದು ಹೆಸರಿಟ್ಟಿದ್ದಾರೆ. ಎದುರಾಳಿ ತಂಡಕ್ಜೆ ಗೆಲ್ಲಲು ಬಿಡದೆ ಸವಾಲೆಸೆಯುವ ಟಾಸ್ಕ್ ಇದಾಗಿದೆ.
Advertisement
ಎರಡು ಟೀಂ ನವರು ಒಂದೊಂದು ಟಾಸ್ಕ್ ನೀಡಬೇಕು. ಎದುರುಗಡೆಯವರು ಯಾವ ರೀತಿಯ ಟಾಸ್ಕ್ ನೀಡುತ್ತಾರೋ ಅದರ ಮೇಲೆ ಮತ್ತೊಂದು ಟೀಂ ಟಾಸ್ಕ್ ನೀಡುತ್ತದೆ. ಸಂಗೀತಾ ನೀಡಿದ ಎರಡನೇ ಟಾಸ್ಕ್‌ನಲ್ಲಿ ಮೆಣಸಿನಕಾಯಿ ತಿನ್ನುವ ಟಾಸ್ಕ್ ನೀಡಲಾಗಿತ್ತು. ಅದರಲ್ಲೂ ಒಂದು ಬೌಲ್‌ನಲ್ಲಿ ಇರುವ ಅಷ್ಟು ಮೆಣಸಿನಕಾಯಿ ತಿನ್ನಬೇಕು. ತನಿಷಾ- ವರ್ತೂರು ಸಂತೋಷ್‌ಗಾಗಿ ಈ ಟಾಸ್ಕ್. ಆದರೆ, ಈ ಟಾಸ್ಕ್ ಕೊಟ್ಟ ಕೂಡಲೇ ಅಷ್ಟು ಮೆಣಸಿನಕಾಯಿ ತಿಂದು ಬದುಕಬಹುದಾ ಎಂದು ವರ್ತೂರು ಸಂತೋಷ್ (Varthur Santhosh) ಎದುರಾಳಿ ಟೀಮ್ ಸಂಗೀತಾಗೆ ಪ್ರಶ್ನೆ ಮಾಡಿದ್ದಾರೆ.
ಸಂಗೀತಾ ಅವರನ್ನು ಗಮನಿಸಿದವರಿಗೆ ಅವರ ನಡವಳಿಕೆ ತಿಳಿದಿರುತ್ತೆ. ಏನೇ ಕೇಳಿದರು ಹೌದು, ಏನಿವಾಗ? ಎಸ್ ಈ ರೀತಿಯ ಟ್ರಿಗರ್ ಆಗುವಂತಹ ರಿಯಾಕ್ಷನ್ ಅವರ ಕಡೆಯಿಂದ ಬರುತ್ತದೆ. ವರ್ತೂರು ಸಂತೋಷ್ ಕೇಳಿದ ಪ್ರಶ್ನೆಗೂ ಅದೇ ಉತ್ತರ ನೀಡಲಾಗಿತ್ತು. ಹೌದು, ತಿಂದು ಬದುಕಬಹುದು. ಅದರ ರೆಕಾರ್ಡ್ಸ್ ಇದೆ ಎಂದೇ ಉತ್ತರ ನೀಡಿದ್ದಾರೆ. ತಕ್ಷಣ ಎಚ್ಚರಗೊಂಡ ಬಿಗ್ ಬಾಸ್ ಸಂಗೀತಾಗೆ ಬುದ್ದಿ ಹೇಳಿದೆ.
ಮೊದಲು ಮಾನವೀಯತೆ ಇಟ್ಟುಕೊಳ್ಳಿ. ಟಾಸ್ಕ್ ವಿಚಾರದಲ್ಲಿ ಮನುಷ್ಯತ್ವ ಬಿಡುವುದು ಬೇಡ ಎಂದು ಬಿಗ್ ಬಾಸ್ ತಿಳಿಸಿದೆ. ಗಜಕೇಸರಿ ಟೀಂ ಸ್ವಿಮ್ಮಿಂಗ್ ಪೂಲ್ ಟಾಸ್ಕ್ ಒಂದನ್ನಷ್ಟೇ ರಿಸೀವ್ ಮಾಡಿಕೊಂಡಿದೆ. ಆದರೆ, ಸಂಪತ್ತಿಗೆ ಸವಾಲ್ ಟೀಂ ಎರಡು ಟಾಸ್ಕ್ ಬಿಟ್ಟರೆ ಇನ್ನುಳಿದ ಎಲ್ಲಾ ಟಾಸ್ಕ್‌ನಲ್ಲೂ ಭಾಗವಹಿಸಿದೆ. ಎಷ್ಟೇ ಕಷ್ಟವಾದರೂ ಆ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದೆ. ಕಡೆಗೆ ಸಂಗೀತಾ ಟೀಮ್ ಎದುರು ಮೈಕಲ್ ತಂಡವೇ ಹೆಚ್ಚಿನ ಅಂಕ ಪಡೆದುಕೊಂಡಿದೆ.