Bharjari Bachelors ಶೋನಿಂದ ಹೊರಬಂದ ಚಂದನಾ ಅನಂತಕೃಷ್ಣ

Public TV
1 Min Read
chandana ananthkrishna

‘ಬಿಗ್ ಬಾಸ್’ (Bigg Boss Kannada) ಬೆಡಗಿ ಚಂದನಾ ಅನಂತಕೃಷ್ಣ (Chandana Ananthakrishna) ಭರ್ಜರಿ ಬ್ಯಾಚುಲರ್ಸ್ (Bharjari Bachelors) ಶೋನಿಂದ ಹೊರಬಂದಿದ್ದಾರೆ. ಜನಪ್ರಿಯ ಶೋನಿಂದ ಸಡನ್ ಆಗಿ ಕ್ವಿಟ್ ಮಾಡಿರೋದ್ದಕ್ಕೆ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

chandana

ಡ್ಯಾನ್ಸ್ ಕೋರಿಯೋಗ್ರಾಫರ್ ರುದ್ರಾ (Rudra) ಅವರಿಗೆ ಜೋಡಿಯಾಗಿ ಪ್ರತಿ ವಾರ ವೀಕೆಂಡ್‌ನಲ್ಲಿ ನಿಮ್ಮೆಲ್ಲರೆದುರು ಬಂದು ನಿಮ್ಮನ್ನ ರಂಜಿಸುತ್ತಿದ್ದರು. ಆದರೆ ಧಿಡೀರ್ ಅಂತಾ ಲಾಸ್ಟ್ ವೀಕ್ ಎಪಿಸೋಡ್‌ನಲ್ಲಿ ಚಂದನಾ ಅವರು ಈ ಶೋ ಕ್ವಿಟ್ ಮಾಡುತ್ತೇನೆ ಎಂದು ವೇದಿಕೆ ಮೇಲೆ ಅನೌನ್ಸ್ ಮಾಡಿದ್ದಾರೆ. ಈ ವಾಹಿನಿಯಲ್ಲೇ ಹೊಚ್ಚ ಹೊಸ ಪ್ರಾಜೆಕ್ಟ್‌ ಜೊತೆ ಮತ್ತೆ ನಿಮ್ಮೆಲ್ಲರ ಎದುರು ಬರುತ್ತೇನೆ ಅಂತಾ ಕ್ವಿಟ್ ಮಾಡುವುದರ ಜೊತೆಗೆ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಕೂಡ ಮಾತನಾಡಿದ್ದಾರೆ.

chandana 1

ಶೋ ಕ್ವಿಟ್ ಮಾಡ್ತಿದ್ದೀನಿ ಅಂತಾ ನಾನು ಮತ್ತೆ ಬರದೇ ಇರಲ್ಲಾ. ಮತ್ತೆ ನಿಮ್ಮನ್ನ ರಂಜಿಸೋಕೆ ಹೊಸ ಪಾತ್ರದಲ್ಲಿ ಬಂದೇ ಬರುತ್ತೀನಿ ಅದು ಕೂಡ ಅತೀ ಶೀಘ್ರದಲ್ಲೇ ಅಂತಾ ಹೇಳಿದ್ದಾರೆ. ಇದನ್ನೂ ಓದಿ:ಗುರು ರಾಯರ ಸನ್ನಿಧಿಯಲ್ಲಿ ‘ಚಿನ್ನದ ಮಲ್ಲಿಗೆ ಹೂವೇ’ ಟೀಮ್

ಚಂದನಾ ಅವರು ಈ ಹಿಂದೆ ‘ರಾಜ ರಾಣಿ’ (Raja Rani) ಸೀರಿಯಲ್ ನಾಯಕಿಯಾಗಿ ಗಮನ ಸೆಳೆದಿದ್ದರು. ಬಳಿಕ ಬಿಗ್ ಬಾಸ್ ಶೋ ಆದ್ಮೇಲೆ ಹೂ ಮಳೆ(Hoo Male) ಧಾರಾವಾಹಿಯ ನಾಯಕಿಯಾಗಿ ಪ್ರೇಕ್ಷಕರ ಮನಗೆದ್ದಿದ್ದರು.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article