‘ಬಿಗ್ ಬಾಸ್’ ಬೆಡಗಿ ಚೈತ್ರಾ ವಾಸುದೇವನ್ (Chaitra Vasudevan) ದಾಂಪತ್ಯ ಜೀವನಕ್ಕೆ (Wedding) ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ಹೊಸ ಜೋಡಿಯ ಮೆಹಂದಿ ಕಾರ್ಯಕ್ರಮವು ಸಂಭ್ರಮದಿಂದ ಜರುಗಿದೆ. ಈ ಕುರಿತ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅಮಲಾ ಪೌಲ್ ಪ್ಯಾಂಟ್‌ಲೆಸ್ ಫೋಟೋಶೂಟ್ ನೋಡಿ ಕಾಲೆಳೆದ ನೆಟ್ಟಿಗರು
Advertisement
ಲೈಟ್ ಬಣ್ಣದ ಡಿಸೈನರ್ ಡ್ರೆಸ್‌ನಲ್ಲಿ ಚೈತ್ರಾ ಮಿಂಚಿದ್ರೆ, ಗಿಳಿ ಹಸಿರು ಶೆರ್ವಾನಿಯಲ್ಲಿ ನಟಿಯ ಭಾವಿ ಪತಿ ಜಗದೀಪ ಕಾಣಿಸಿಕೊಂಡಿದ್ದಾರೆ. ಕೈ ಮತ್ತು ಕಾಲಿಗೆ ಮೆಹಂದಿ ಹಾಕಿರುವ ಚೈತ್ರಾ ಅವರು ಭಾವಿ ಪತಿ ಜೊತೆ ರೊಮ್ಯಾಂಟಿಕ್ ಆಗಿ ಪೋಸ್ ನೀಡಿದ್ದಾರೆ.
Advertisement
View this post on Instagram
ಇನ್ನೂ ಉದ್ಯಮಿ ಜಗದೀಪ್‌ರನ್ನು ಪ್ರೀತಿಸಿ ಗುರುಹಿರಿಯರ ಸಮ್ಮತಿಯ ಮೇರೆಗೆ ಹಸೆಮಣೆ ಏರಲು ಚೈತ್ರಾ ರೆಡಿಯಾಗಿದ್ದಾರೆ. 2ನೇ ಮದುವೆಗೆ ಸಜ್ಜಾಗಿರುವ ಚೈತ್ರಾಗೆ ಫ್ಯಾನ್ಸ್ ಶುಭಕೋರಿದ್ದಾರೆ.