‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ವಾಸುದೇವನ್ (Chaithra Vasudevan) ಮಾಜಿ ಪತಿ ಸತ್ಯ ನಾಯ್ಡು ಅವರು ಅದ್ಧೂರಿಯಾಗಿ 2ನೇ ಮದುವೆಯಾಗಿದ್ದಾರೆ. ಸತ್ಯ ನಾಯ್ಡು (Sathya Naidu) ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
Advertisement
ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರದಲ್ಲಿ ಮಾರ್ಚ್ 3ರಂದು ವಸುಂಧರಾ ರೆಡ್ಡಿ ಅವರನ್ನು ಸತ್ಯ ನಾಯ್ಡು ಮದುವೆಯಾಗಿದ್ದಾರೆ. ಅಚ್ಚರಿ ಅಂದ್ರೆ, ಉದ್ಯಮಿ ಜಗದೀಪ್ ಜೊತೆ ಚೈತ್ರಾ ವಾಸುದೇವನ್ ಮದುವೆಯಾದ ಮರುದಿನವೇ ಅದೇ ಜಾಗ ‘ಚಾಮರ ವಜ್ರ’ದಲ್ಲಿ ಸತ್ಯ ಕೂಡ ಮದುವೆಯಾಗಿದ್ದಾರೆ.
Advertisement
Advertisement
ಇನ್ನೂ ಸತ್ಯ ನಾಯ್ಡು ಮದುವೆಗೆ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಭಾಗಿಯಾಗಿ ಶುಭಕೋರಿದ್ದಾರೆ. ಅನೇಕ ರಾಜಕೀಯ ಮುಖಂಡರು ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ.
Advertisement
ಅಂದಹಾಗೆ, 2017ರಲ್ಲಿ ಚೈತ್ರಾ ವಾಸುದೇವನ್ ಸತ್ಯ ನಾಯ್ಡು ಮದುವೆಯಾಗಿದ್ದರು. ಕಾರಣಾಂತರಗಳಿಂದ 2023ರಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರೂ ವಿಚ್ಛೇದನ ಪಡೆದರು. ಉದ್ಯಮಿ ಜಗದೀಪ್ ಅವರನ್ನ ಪ್ರೀತಿಸಿದ ಚೈತ್ರಾ ವಾಸುದೇವನ್ ಮಾರ್ಚ್ 2 ರಂದು ಎರಡನೇ ವಿವಾಹವಾದರು. ಮಾಜಿ ಪತಿ ಸತ್ಯ ನಾಯ್ಡು ಸಹ ಹೊಸ ಜೀವನ ಆರಂಭಿಸಿದ್ದಾರೆ.